ADVERTISEMENT

ಜ. 27ರಿಂದ ನಾರಾ ಲೋಕೇಶ್ 4 ಸಾವಿರ ಕಿ.ಮೀ. ಪಾದಯಾತ್ರೆ ಆರಂಭ

ಪಿಟಿಐ
Published 25 ನವೆಂಬರ್ 2022, 15:44 IST
Last Updated 25 ನವೆಂಬರ್ 2022, 15:44 IST
ನಾರಾ ಲೋಕೇಶ್ 
ನಾರಾ ಲೋಕೇಶ್    

ಅಮರಾವತಿ: ವೈಎಸ್‌ಆರ್ ಕಾಂಗ್ರೆಸ್‌ನಿಂದ ಅಧಿಕಾರವನ್ನು ಮರಳಿ ಪಡೆಯುವ ಸಲುವಾಗಿ ಆಂಧ್ರದ ಶಾಸಕ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು 2023ರ ಜನವರಿ 27ರಿಂದ 4 ಸಾವಿರ ಕಿ.ಮೀ ದೂರದ ‘ಪಾದಯಾತ್ರೆ’ ಆರಂಭಿಸಲಿದ್ದಾರೆ.

ಟಿಡಿಪಿ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ರಾಜಕೀಯ ವಾರಸುದಾರರಾಗಿರುವ ನಾರಾ ಲೋಕೇಶ್ ಅವರ ಕಾರ್ಯತಂತ್ರದ ನಡೆ ಬಗ್ಗೆ ಕೆಲ ದಿನಗಳಿಂದ ಚರ್ಚೆಯಾಗುತ್ತಿದ್ದು, ಇದೀಗ ಅವರು ತಮ್ಮ ಪಾದಯಾತ್ರೆ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

‘ಆಂಧ್ರದಾದ್ಯಂತ ಜ. 27ರಿಂದ ನಾನು ಸುಮಾರು 400 ದಿನಗಳ ಕಾಲ 4 ಸಾವಿರ ಕಿ.ಮೀ. ಗಳಷ್ಟು ಪಾದಯಾತ್ರೆ ಕೈಗೊಳ್ಳಲಿದ್ದೇನೆ. ಮುಖ್ಯಮಂತ್ರಿ ಜಗನ್‌ ಮೋಹನ ರೆಡ್ಡಿಗೆ ನಮ್ಮ ಕೋಟೆಯನ್ನು ಒಡೆಯಲು ಬಿಡುವುದಿಲ್ಲ’ ಎಂದು ಲೋಕೇಶ್ ಮಂಗಳಗಿರಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ADVERTISEMENT

2019ರ ವಿಧಾನಸಭಾ ಚುನಾವಣೆಯಲ್ಲಿ ಅಮರಾವತಿಯ ಭಾಗವಾಗಿರುವ ಮಂಗಳಗಿರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೋಕೇಶ್ ಸೋಲು ಅನುಭವಿಸಿದ್ದರು. 2024 ಏಪ್ರಿಲ್– ಮೇ ತಿಂಗಳಲ್ಲಿ ಆಂಧ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.