ಕೆ. ರಘು ರಾಮಕೃಷ್ಣ ರಾಜು
-ಟ್ವಿಟರ್ ಚಿತ್ರ
ಅಮರಾವತಿ (ಆಂಧ್ರಪ್ರದೇಶ): ನರಸಾಪುರ ಕ್ಷೇತ್ರದ ಸಂಸದ ಕೆ. ರಘು ರಾಮಕೃಷ್ಣ ರಾಜು ಅವರು ಆಂಧ್ರಪ್ರದೇಶದ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಪಿ ಪಕ್ಷಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಪತ್ರವನ್ನು ಜಗನ್ ಮೋಹನ್ ರೆಡ್ಡಿ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿರುವ ರಘು ಅವರು, ‘ಅಸಹ್ಯಕರ ಸಹವಾಸದಿಂದ ಮುಕ್ತವಾಗುವ ಸಂದರ್ಭ ಬಂದಿದೆ. ನಾನು ವೈಎಸ್‌ಆರ್‌ಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಶೀಘ್ರವೇ ನೀವು ಇದನ್ನು ಅಂಗೀಕರಿಸುತ್ತೀರೆಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.
‘ಸಾರ್ವಜನಿಕರಿಗೆ ಒಳಿತನ್ನು ಮಾಡಬೇಕೆಂಬ ಬಲವಾದ ಉದ್ದೇಶದಿಂದ ಈ ರಾಜೀನಾಮೆ ನೀಡಿದ್ದೇನೆ. ಸಾರ್ವಜನಿಕರ ಪ್ರಾಮಾಣಿಕ ಜನಾದೇಶವನ್ನು ಪಾಲಿಸಬೇಕಾದ ಸಮಯ ಈಗ ಬಂದಿದೆ’ ಎಂದೂ ಅವರು ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.