ADVERTISEMENT

ಮೋದಿ ಹುಟ್ಟುಹಬ್ಬ: ಶುಭ ಕೋರಿದ ಟ್ರಂಪ್‌

ಪಿಟಿಐ
Published 16 ಸೆಪ್ಟೆಂಬರ್ 2025, 20:09 IST
Last Updated 16 ಸೆಪ್ಟೆಂಬರ್ 2025, 20:09 IST
ನರೇಂದ್ರ ಮೋದಿ– ಡೊನಾಲ್ಡ್‌ ಟ್ರಂಪ್‌
ನರೇಂದ್ರ ಮೋದಿ– ಡೊನಾಲ್ಡ್‌ ಟ್ರಂಪ್‌   

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಕರೆ ಮಾಡಿ 75ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಇದು ಭಾರತದ ಜತೆಗಿನ ಸಂಬಂಧವನ್ನು ಪುನರ್‌ ಸ್ಥಾಪಿಸುವ ಅಮೆರಿಕದ ಪ್ರಯತ್ನದ ಭಾಗವಾಗಿದೆ.

‘ಫೋನ್‌ ಕರೆ ಮಾಡಿ ನನ್ನ 75ನೇ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಕ್ಕಾಗಿ ನನ್ನ ಗೆಳೆಯ, ಅಧ್ಯಕ್ಷ ಟ್ರಂಪ್‌ ಅವರಿಗೆ ಧನ್ಯವಾದಗಳು’ ಎಂದು ಮೋದಿ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.   

ADVERTISEMENT

‘ನಿಮ್ಮಂತೆಯೇ ನಾನು ಸಹ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತು ಜಾಗತಿಕ ಪಾಲುದಾರಿಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಪೂರ್ಣವಾಗಿ ಬದ್ಧವಾಗಿದ್ದೇನೆ’ ಎಂದು ಅವರು ತಿಳಿಸಿದ್ದಾರೆ. 

‘ಉಕ್ರೇನ್‌ ಸಂಘರ್ಷ ಶಮನಕ್ಕೆ, ಶಾಂತಿಯುತ ಪರಿಹಾರಕ್ಕಾಗಿ ನಿಮ್ಮ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ’ ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ. ಮೋದಿ ಅವರ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನ ಟ್ರಂಪ್ ಅವರು ಶುಭ ಕೋರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.