ADVERTISEMENT

Mann Ki Baat | ಪ್ರಧಾನಿ ಮೋದಿ 'ಮನ್ ಕಿ ಬಾತ್' ಭಾಷಣದ ಮುಖ್ಯಾಂಶಗಳು

‘ಸ್ವದೇಶಿ’ ಉತ್ಪನ್ನಗಳ ಬಗ್ಗೆ ಹೆಮ್ಮೆಯಿರಲಿ– ಪ್ರಧಾನಿ ಮೋದಿ

ಪಿಟಿಐ
Published 31 ಆಗಸ್ಟ್ 2025, 14:08 IST
Last Updated 31 ಆಗಸ್ಟ್ 2025, 14:08 IST
ಹುಬ್ಬಳ್ಳಿಯ ಗಣೇಶ ಪೆಂಡಾಲ್‌ವೊಂದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿ ಕಾರ್ಯಕರ್ತರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಮಾಸಾಂತ್ಯದ ಮನ್‌ ಕಿ ಬಾತ್‌ನ 125ನೇ ಸಂಚಿಕೆಯನ್ನು ಆಲಿಸಿದರು   ಪಿಟಿಐ ಚಿತ್ರ
ಹುಬ್ಬಳ್ಳಿಯ ಗಣೇಶ ಪೆಂಡಾಲ್‌ವೊಂದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿ ಕಾರ್ಯಕರ್ತರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಮಾಸಾಂತ್ಯದ ಮನ್‌ ಕಿ ಬಾತ್‌ನ 125ನೇ ಸಂಚಿಕೆಯನ್ನು ಆಲಿಸಿದರು   ಪಿಟಿಐ ಚಿತ್ರ   

ನವದೆಹಲಿ: ಮುಂಬರುವ ವಾರಗಳಲ್ಲಿ ಸಾಲು ಸಾಲು ಹಬ್ಬಗಳಿದ್ದು, ‘ಸ್ವದೇಶಿ’ ಉತ್ಪನ್ನಗಳ ಬಗ್ಗೆ ಹೆಮ್ಮೆಯಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕಿ ಬಾತ್‌ನಲ್ಲಿ ಹೇಳಿದ್ದಾರೆ.

‘ನಮ್ಮ ಬದುಕಿಗೆ ಅವಶ್ಯವಿರುವ ಎಲ್ಲ ವಸ್ತುಗಳು ಸ್ವದೇಶಿಯೇ ಆಗಿರಬೇಕು. ಅವನ್ನೇ ನಾವು ಬಳಸಬೇಕು’ ಎಂದು ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

‘ಆತ್ಮನಿರ್ಭರ ಭಾರತ’ದ ಹಾದಿಯು ಅಭಿವೃದ್ಧಿ ಹೊಂದಿದ ಭಾರತಕ್ಕೆ ಕಾರಣವಾಗಲಿ ದೆ ಎಂದು ಸ್ವದೇಶಿ ಮಂತ್ರವನ್ನು ಭಾನುವಾರ ಪ್ರಸಾರಗೊಂಡ ಮಾಸಾಂತ್ಯದ ‘ಮನದ ಮಾತು’ ಕಾರ್ಯಕ್ರಮದ 125ನೇ ಸಂಚಿಕೆಯಲ್ಲಿ ಪುನರುಚ್ಚರಿಸಿದ್ದಾರೆ.

ADVERTISEMENT

‘ದೇಶದ ವಿವಿಧೆಡೆ ಇದೀಗ ಗಣೇಶ ಪೂಜೆ ನಡೆದಿದೆ. ಮುಂದೆ ದಸರಾ, ದುರ್ಗಾಪೂಜೆ, ದೀಪಾವಳಿ ಹಬ್ಬಗಳು ಬರಲಿವೆ. ಈ ಸಂದರ್ಭ ಉಡುಗೊರೆಯಿರಲಿ, ಹೊಸ ಬಟ್ಟೆಯಾಗಲಿ, ಅಲಂಕಾರಿಕ ಸಾಮಗ್ರಿಗಳ ಖರೀದಿಯೇ ಆಗಲಿ... ಈ ಎಲ್ಲವೂ ನಮ್ಮ ಸ್ವದೇಶಿ ಉತ್ಪನ್ನಗಳೇ ಆಗಿರಬೇಕು ಎಂಬುದನ್ನು ಜನರು ಮರೆಯಬಾರದು’ ಎಂದಿದ್ದಾರೆ.

‘ಹೆಮ್ಮೆಯಿಂದ ಹೇಳಿ ಇದು ಸ್ವದೇಶಿ ಎಂದು. ಈ ಭಾವನೆಯೊಂದಿಗೆ ನಾವು ಮುಂದುವರಿಯಬೇಕಿದೆ. ಸ್ಥಳೀಯ ಉತ್ಪನ್ನಗಳಿಗೆ ಧ್ವನಿ ನೀಡುವುದು (ವೋಕಲ್‌ ಫಾರ್‌ ಲೋಕಲ್‌) ನಮ್ಮ ಏಕೈಕ ಗುರಿ. ಇದಕ್ಕಿರುವ ಏಕೈಕ ಮಾರ್ಗ ಆತ್ಮನಿರ್ಭರ ಭಾರತ. ಇದರ ಪರಿಣಾಮ ದೇಶದ ಅಭಿವೃದ್ಧಿ’ ಎಂದು ಹೇಳಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತೀಯ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕವನ್ನು ವಿಧಿಸಿದ ನಂತರ ಎರಡೂ ದೇಶಗಳ ನಡುವಿನ ಬಾಂಧವ್ಯವು ಕುಸಿದಿರುವ ಸಂದರ್ಭ, ದೇಶವು ಸ್ವಾವಲಂಬಿಯಾಗಬೇಕಾದ ಅಗತ್ಯವನ್ನು ಮೋದಿ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

ರಾಮಾಯಣ ಮತ್ತು ಭಾರತೀಯ ಸಂಸ್ಕೃತಿ ಮೇಲಿನ ಪ್ರೀತಿಯೂ ಇದೀಗ ಪ್ರಪಂಚದ ಎಲ್ಲ ಮೂಲೆಯನ್ನು ತಲುಪುತ್ತಿದೆ
ನರೇಂದ್ರ ಮೋದಿ ಪ್ರಧಾನಿ

ಪ್ರಸ್ತಾಪವಾದ ಪ್ರಮುಖ ವಿಷಯಗಳು

* ಮೇಘಸ್ಫೋಟ ಮಳೆಯಿಂದಾದ ಹಾನಿ

* ರಕ್ಷಣೆಗೆ ಅತ್ಯಾಧುನಿಕ ಉಪಕರಣಗಳ ಬಳಕೆ

* ಜಮ್ಮು– ಕಾಶ್ಮೀರದಲ್ಲಿ ನಡೆದ ಕ್ರೀಡಾ ಚಟುವಟಿಕೆ

* ನಿಜಾಮರ ಆಡಳಿತದಿಂದ ಹೈದರಾಬಾದ್‌ನ ವಿಮೋಚನೆ

* ರಷ್ಯಾದಲ್ಲಿ ಚಿಣ್ಣರು ಬಿಡಿಸಿದ ರಾಮಾಯಣದ ಚಿತ್ರಗಳ ಪ್ರದರ್ಶನ

* ಕೆನಡಾದಲ್ಲಿ 51 ಅಡಿ ಎತ್ತರದ ದೇವರ ಮೂರ್ತಿ ಪ್ರತಿಷ್ಠಾಪನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.