ADVERTISEMENT

ಯಸ್‌ ಚಂಡಮಾರುತ: ಒಡಿಶಾದಲ್ಲಿ ಪ್ರಧಾನಿ ಮೋದಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 28 ಮೇ 2021, 8:21 IST
Last Updated 28 ಮೇ 2021, 8:21 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಭುವನೇಶ್ವರ (ಪಿಟಿಐ): ಯಸ್‌ ಚಂಡಮಾರುತದಿಂದ ಉಂಟಾಗಿರುವ ಹಾನಿ ಮತ್ತು ಆ ನಂತರದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಲ್ಲಿ ನಡೆದ ಸಭೆಯಲ್ಲಿ ಪರಿಶೀಲಿಸಿದರು.

ಚಂಡಮಾರುತದಿಂದ ಉಂಟಾದ ಪರಿಸ್ಥಿತಿಯ ಕುರಿತು ಅವಲೋಕಿಸಲು ಇಲ್ಲಿಯ ಬಿಜು ಪಟ್ನಾಯಕ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯನ್ನು ರಾಜ್ಯಪಾಲ ಗಣೇಶಿ ಲಾಲ್‌, ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಪ್ರತಾಪ್‌ ಸಾರಂಗಿ ಸ್ವಾಗತಿಸಿದರು.

ಯಸ್‌ ಚಂಡಮಾರುತದಿಂದಾಗಿ ಕನಿಷ್ಠ4 ಮಂದಿ ಜೀವ ಕಳೆದುಕೊಂಡಿದ್ದಾರೆ. ಮನೆ, ಹೊಲಗಳಿಗೆ ಅಪಾರ ಹಾನಿಯಾಗಿದೆ. ಪಶ್ಚಿಮ ಬಂಗಾಳ,ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಸುಮಾರು 21 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.