ADVERTISEMENT

ಪೋಲಿಯೊ ಲಸಿಕೆ ದಿನ ಜ.31ಕ್ಕೆ ಮುಂದೂಡಿಕೆ

ಪಿಟಿಐ
Published 14 ಜನವರಿ 2021, 9:24 IST
Last Updated 14 ಜನವರಿ 2021, 9:24 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಇದೇ 17ರಂದು ದೇಶದಾದ್ಯಂತ ನಿಗದಿಯಾಗಿದ್ದ ‘ರಾಷ್ಟ್ರೀಯ ಪಲ್ಸ್‌ ಪೋಲಿಯೊ ಲಸಿಕೆ‘ ಕಾರ್ಯಕ್ರಮವನ್ನು ಜನವರಿ 31ಕ್ಕೆ ಮುಂದೂಡಲಾಗಿದೆ.

ಜನವರಿ 16ರಂದು ‘ಕೋವಿಡ್‌ 19’ವಿರುದ್ಧದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡುತ್ತಿದ್ದಾರೆ. ಇದು ವಿಶ್ವದ ಅತಿದೊಡ್ಡ ರೋಗನಿರೋಧಕಶಕ್ತಿಯ ಅಭಿಯಾನವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರಪತಿ ಕಚೇರಿಯೊಂದಿಗೆ ಸಮಾಲೋಚಿಸಿ, ಪೋಲಿಯೊ ಲಸಿಕೆ ದಿನವನ್ನು ಜನವರಿ 31 ಕ್ಕೆ ಮುಂದೂಡಿದೆ‘ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಷ್ಟ್ರಪತಿಯವರು ಜ.31ರಂದು ಬೆಳಿಗ್ಗೆ 11.45ಕ್ಕೆ ನವದೆಹಲಿಯ ರಾಜಭವನದಲ್ಲಿ ಐದುವರ್ಷದೊಳಗಿನ ಕೆಲವೊಂದು ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ‘ರಾಷ್ಟ್ರೀಯ ರೋಗನಿರೋಧಕ ದಿನ‘ಕ್ಕೆ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.