ನವೀನ್ ಪಟ್ನಾಯಕ್
ಭುವನೇಶ್ವರ: ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶನಿವಾರ ಸತತ ಒಂಬತ್ತನೇ ಬಾರಿಗೆ ಬಿಜು ಜನತಾದಳದ (ಬಿಜೆಡಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಕ್ಷದ ಸ್ಥಾಪಕಾಧ್ಯಕ್ಷರಾದ ಪಟ್ನಾಯಕ್ ಅವರು ಮಾತ್ರ ಈ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.
ಬಿಜೆಡಿಯ ಸಾಂಸ್ಥಿಕ ಚುನಾವಣಾ ರಿಟರ್ನಿಂಗ್ ಅಧಿಕಾರಿ ಪಿ.ಕೆ ದೇಬ್ ಅವರು ಪಟ್ನಾಯಕ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಘೋಷಿಸಿದರು. ರಾಜ್ಯ ಪ್ರಧಾನ ಕಚೇರಿ ಶಂಖ ಭವನದಲ್ಲಿ ನಡೆದ ರಾಜ್ಯ ಮಂಡಳಿ ಸಭೆಯಲ್ಲಿ ಈ ಘೋಷಣೆ ನಡೆಯಿತು.
ಹೆಸರು ಘೋಷಣೆ ಬೆನ್ನಲ್ಲೇ, ಪಕ್ಷದ ಜಿಲ್ಲಾ ನಾಯಕರು ಪಟ್ನಾಯಕ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಹೂಗುಚ್ಛ, ವರ್ಣಚಿತ್ರ ಮತ್ತು ಭಗವಾನ್ ಜಗನ್ನಾಥನ 'ಅಂಗಬಸ್ತ್ರ' ಮತ್ತು 'ಮಹಾ ಪ್ರಸಾದ್' ನೀಡಿದರು.
ಪಕ್ಷದ ರಾಜ್ಯ ಮಂಡಳಿಯು 355 ಸದಸ್ಯರನ್ನು ಹೊಂದಿದ್ದು, ಅವರಲ್ಲಿ 80 ಜನರನ್ನು ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ದೇಬ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.