ಬಂಧನ
ಸುಕ್ಮಾ: ಕಳೆದ ತಿಂಗಳು ಛತ್ತೀಸಗಢದ ಸುಕ್ಮಾ ಜಿಲ್ಲೆಯ ಕಲ್ಲು ಕ್ವಾರಿವೊಂದರಲ್ಲಿ ನಕ್ಸಲರು ಸ್ಫೋಟಿಸಿದ ಕಚ್ಚಾ ಬಾಂಬ್‌ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಸೋಧಿ ಗಂಗಾ ಎನ್ನುವ ನಕ್ಸಲನನ್ನು ರಾಜ್ಯ ತನಿಖಾ ತಂಡ (ಎಸ್‌ಐಎ) ಬಂಧಿಸಿದೆ.
‘ಗಂಗಾ, ರೆವಲ್ಯೂಷನರಿ ಪಾರ್ಟಿ ಕಮಿಟಿಗೆ (ಆರ್‌ಪಿಸಿ) ಸೇರಿದ ನಕ್ಸಲನಾಗಿದ್ದಾನೆ. ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ತನ್ನ ಇತರ ಸಹವರ್ತಿಗಳ ಹೆಸರನ್ನು ಈತ ಬಾಯಿಬಿಟ್ಟಿದ್ದಾನೆ. ಜೊತೆಗೆ ತಾನೂ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.