ADVERTISEMENT

ಛತ್ತೀಸಗಢ | ಎನ್‌ಕೌಂಟರ್‌: ನಕ್ಸಲ್‌ ಹತ್ಯೆ

ಪಿಟಿಐ
Published 3 ಮೇ 2025, 13:10 IST
Last Updated 3 ಮೇ 2025, 13:10 IST
.
.   

ಗರಿಯಾಬಂದ್‌: ಗಡಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲರೊಬ್ಬರು ಹತರಾಗಿದ್ದಾರೆ.

ವಿಭಾಗೀಯ ಸಮಿತಿ ಸದಸ್ಯ ಯೋಗೇಶ್‌ ಮೃತ ನಕ್ಸಲ್‌. ಗುಂಡಿನ ಚಕಮಕಿ ನಡೆದ ಸ್ಥಳದಿಂದ ಈತನ ಮೃತದೇಹ, ರೈಫಲ್‌, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಸುಳಿವು ನೀಡಿದವರಿಗೆ ₹ 8 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ADVERTISEMENT

ಜುಗಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಮೋತಿಪಾನಿ ಗ್ರಾಮದ ಸಮೀಪ ಇರುವ ಕಾಡಿನಲ್ಲಿ ಶುಕ್ರವಾರ ತಡರಾತ್ರಿ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಮತ್ತು ಜಿಲ್ಲಾ ‍ಪೊಲೀಸ್‌ ಘಟಕದ ಇ– 30 ತಂಡವು ನಕ್ಸಲ್‌ ವಿರೋಧಿ ಕಾರ್ಯಾಚರಣೆ ಕೈಗೊಂಡಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.