ADVERTISEMENT

ಛತ್ತೀಸಗಡ: 12 ಮಹಿಳೆಯರು ಸೇರಿ 24 ಮಂದಿ ನಕ್ಸಲರು ಶರಣು

ಪಿಟಿಐ
Published 27 ಜನವರಿ 2021, 7:58 IST
Last Updated 27 ಜನವರಿ 2021, 7:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಾಂತೇವಾಡ: ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ 12 ಮಹಿಳೆಯರು ಸೇರಿದಂತೆ ಒಟ್ಟು 24 ಮಂದಿ ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದರು.

‘ದಕ್ಷಿಣ ಬಸ್ತಾರ್‌ ಪ್ರಾಂತ್ಯದಲ್ಲಿ ಚುರುಕಾಗಿದ್ದ ನಕ್ಸಲರು ಗಣರಾಜ್ಯೋತ್ಸವದ ದಿನದಂದು ಪೊಲೀಸರಿಗೆ ಶರಣಾಗಿದ್ದಾರೆ. ಇದರಲ್ಲಿ ಮೂವರ ಪತ್ತೆಗೆ ಸರ್ಕಾರವು ₹1 ಲಕ್ಷ ನಗದು ಪುರಸ್ಕಾರ ಘೋಷಿಸಿತ್ತು’ ಎಂದು ದಾಂತೇವಾಡದ ಪೊಲೀಸ್ ಅಧಿಕಾರಿ ಅಭಿಷೇಕ್‌ ಪಲ್ಲವ ಹೇಳಿದರು.

‘ತಾವು ಮಾವೋವಾದಿಗಳ ತತ್ವಗಳಿಂದ ಬೇಸರಗೊಂಡು ಶರಣಾಗಿದ್ದೇವೆ. ಅಲ್ಲದೆ ‘ಲೋನ್‌ ವರೋತ್ತು’ (ಮರಳಿ ಮನೆಗೆ) ಅಭಿಯಾನವು ನಮ್ಮನ್ನು ಹಿಂಸೆಯನ್ನು ತೊರೆಯುವಂತೆ ಪ್ರೇರಿಪಿಸಿತು’ ಎಂದು ನಕ್ಸಲರು ಹೇಳಿದ್ದಾರೆ.

ADVERTISEMENT


‘ಸದ್ಯ ಅವರಿಗೆ ತಲಾ ₹10,000 ನೆರವು ನೀಡಲಾಗಿದೆ. ಬಳಿಕ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಹೆಚ್ಚಿನ ನೆರವು ದೊರೆಯುತ್ತದೆ’ ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಆರಂಭಿಸಲಾದ ಅಭಿಯಾನದಡಿ ಈವರೆಗೆದಾಂತೇವಾಡ ಜಿಲ್ಲೆಯಲ್ಲಿ 272 ನಕ್ಸಲರು ಶರಣಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.