
ಬಂಧನ
(ಸಾಂದರ್ಭಿಕ ಚಿತ್ರ)
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಗೋವಾ ಡ್ರಗ್ಸ್‌ಜಾಲದ ‘ಕಿಂಗ್‌ಪಿನ್’ ದಾನಿಶ್ ಚಿಕ್‌ನನನ್ನು ಮಾದಕ ವಸ್ತುಗಳ ನಿಯಂತ್ರಣ ದಳ(ಎನ್‌ಸಿಬಿ) ಗೋವಾದಲ್ಲಿ ಬಂಧಿಸಿದೆ.
ದಾವೂದ್ ಗ್ಯಾಂಗ್‌ಗೆ ಸಂಬಂಧಿಸಿ ದೇಶದಲ್ಲಿರುವ ಡ್ರಗ್ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿದ ಎನ್‌ಸಿಬಿ, ದಾನೀಶ್ ಸೇರಿದಂತೆ ನಾಲ್ವರನ್ನು ಬಂಧಿಸಿ, 1.341 ಕೆ.ಜಿ ತೂಕದ ‘ಮೆಫೆಡ್ರೋನ್’ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದಲ್ಲಿ ಎನ್‌ಸಿಬಿಯು ಸೆಪ್ಟೆಂಬರ್ 18ರಂದು ಪುಣೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿ, 502 ಗ್ರಾಂ ‘ಮೆಫೆಡ್ರೋನ್’ ಅನ್ನು ವಶಪಡಿಸಿಕೊಂಡಿತ್ತು. ಬಳಿಕ ದಾನೀಶ್ ಮತ್ತು ಆತನ ಪತ್ನಿಯ ಮುಂಬೈ ನಿವಾಸದಿಂದ 839 ಗ್ರಾಂ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾನೀಶ್ ಮತ್ತು ಆತನ ಪತ್ನಿ ಡ್ರಗ್ಸ್ ಜಾಲ ನಡೆಸುತ್ತಿರುವುದು ತನಿಖೆಯಿಂದ ಪತ್ತೆಯಾಗಿದೆ. ಅವರಿಬ್ಬರು ತಲೆಮರೆಸಿಕೊಂಡು, ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣಿಸುತ್ತಿದ್ದರು. ಗೋವಾದ ರೆಸಾರ್ಟ್‌ನಲ್ಲಿ ತಂಗಿದ್ದ ಅವರನ್ನು ಶನಿವಾರ ವಶಕ್ಕೆ ಪಡೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕವಸ್ತು ಜಾಲ ಪ್ರಕರಣದ ಆರೋಪಿಯಾಗಿರುವ ದಾನೀಶ್ ವಿರುದ್ಧ ಎನ್‌ಸಿಬಿ ಮತ್ತು ರಾಜಸ್ಥಾನ ಪೊಲೀಸರು ಈ ಹಿಂದೆ ಮೂರು ಪ್ರಕರಣಗಳನ್ನು ದಾಖಲಿಸಿದ್ದರು. ಮುಂಬೈ ಪೊಲೀಸರು ಆತನ ವಿರುದ್ಧ 7 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.