ADVERTISEMENT

ಮಹಿಳೆಯರ ವಿರುದ್ಧ ಅಪರಾಧ: 2022ರಲ್ಲಿ ಉತ್ತರ ಪ್ರದೇಶದಲ್ಲೇ ಶೇ 54ರಷ್ಟು ದೂರು

ಪಿಟಿಐ
Published 1 ಜನವರಿ 2023, 10:54 IST
Last Updated 1 ಜನವರಿ 2023, 10:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2022ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಸುಮಾರು 31 ಸಾವಿರ ದೂರುಗಳನ್ನು ಸ್ವೀಕರಿಸಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಳ್ಯು) ಹೇಳಿದೆ. ಇದು 2014ರಿಂದ ದಾಖಲಾಗಿರುವ ಅತ್ಯಧಿಕ ದೂರುಗಳು.

2021ರಲ್ಲಿ ಎನ್‌ಸಿಡಬ್ಳ್ಯು 30,864 ದೂರುಗಳನ್ನು ಸ್ವೀಕರಿಸಿತ್ತು. 2022ರಲ್ಲಿ ಕೊಂಚ ಹೆಚ್ಚಾಗಿದ್ದು ಒಟ್ಟು 30,957 ದೂರುಗಳು ದಾಖಲಾಗಿವೆ.

ಈ ಪೈಕಿ 9,710 ದೂರುಗಳು ಮಾನಸಿಕ ಕಿರುಕುಳಕ್ಕೆ ಸಂಬಂಧಿಸಿವೆ. 6,970 ದೂರುಗಳು ಕೌಟುಂಬಿಕ ಕಿರುಕುಳಕ್ಕೆ ಸಂಬಂಧಿಸಿವೆ. ಇನ್ನು 4,600 ದೂರುಗಳು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿವೆ ಎಂದು ಎನ್‌ಸಿಡಬ್ಳ್ಯು ತಿಳಿಸಿದೆ.

ADVERTISEMENT

ಉತ್ತರ ಪ್ರದೇಶ ಒಂದರಲ್ಲೇ ಶೇ 54.3ರಷ್ಟು (16,872) ದೂರುಗಳು ದಾಖಲಾಗಿದ್ದು, ದೇಶದಲ್ಲೇ ಅಧಿಕವಾಗಿದೆ. ನಂತರದ ಸ್ಥಾನದಲ್ಲಿ ದೆಹಲಿ (3,004), ಮಹಾರಾಷ್ಟ್ರ (1,381), ಬಿಹಾರ (1,368) ಹಾಗೂ ಹರಿಯಾಣ (1,362) ರಾಜ್ಯಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.