ADVERTISEMENT

ಲಸಿಕೆ ಅಭಿಯಾನ: 16 ಕೋಟಿ ಮುನ್ನೆಚ್ಚರಿಕೆ ಡೋಸ್‌ ನೀಡಿಕೆ

ಪಿಟಿಐ
Published 30 ಸೆಪ್ಟೆಂಬರ್ 2022, 16:04 IST
Last Updated 30 ಸೆಪ್ಟೆಂಬರ್ 2022, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಎಪ್ಪತ್ತೈದು ದಿನಗಳ ಕಾಲ ನಡೆಸಿದ ‘ಕೋವಿಡ್‌ ಲಸಿಕೆ ಅಮೃತ ಮಹೋತ್ಸವ’ ಅಭಿಯಾನದಲ್ಲಿ ಸರಿಸುಮಾರು 16 ಕೋಟಿ ಮುನ್ನೆಚರಿಕೆ ಡೋಸ್‌ಗಳನ್ನು ನೀಡಲಾಗಿದೆ. ಈ ಅಭಿಯಾನ ಪ್ರಾರಂಭಿಸುವ ಮೊದಲು ಶೇ 8ರಷ್ಟಿದ್ದ ಮುನ್ನೆಚರಿಕೆ ಡೋಸ್‌ಅನ್ನು ಪಡೆದುಕೊಂಡವರ ಸಂಖ್ಯೆ, ಈಗ ಶೇ 27ಕ್ಕೆ ಏರಿಕೆಯಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಜುಲೈ 15ರಂದು ಈ ಅಭಿಯಾನವನ್ನು ಆರಂಭಿಸಲಾಗಿತ್ತು. ಚಾರ್‌ ಧಾಮ್‌ ಯಾತ್ರೆ, ಅಮರನಾಥ ಯಾತ್ರೆ ಸೇರಿದಂತೆ ಹಲವು ಧಾರ್ಮಿಕ ಯಾತ್ರೆಗಳಲ್ಲಿ ಶಿಬಿರಗಳನ್ನು ಮಾಡಲಾಗಿದೆ. ಜೊತೆಗೆ, ರೈಲು, ಬಸ್‌, ವಿಮಾನ ನಿಲ್ದಾಣಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಖಾಸಗಿ, ಸರ್ಕಾರಿ ಕಚೇರಿಗಳಲ್ಲಿ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡುವ ಶಿಬಿರಗಳನ್ನು ಮಾಡಲಾಗಿತ್ತು ಎಂದಿದೆ.

ಅಂಕಿ ಅಂಶ

ADVERTISEMENT

13,01,778 ಶಿಬಿರಗಳು

76.18 ಕೋಟಿ ಮೊದಲ ಡೋಸ್‌

2.35 ಕೋಟಿ ಎರಡನೇ ಡೋಸ್‌

15.92 ಕೋಟಿ ಮುನ್ನೆಚ್ಚರಿಕಾ ಡೋಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.