ADVERTISEMENT

ದೆಹಲಿ | ಕೋವಿಡ್: ‘ಮನೆಯಲ್ಲಿ ಪ್ರತ್ಯೇಕವಾಸ’ ಪ್ರಕರಣಗಳ ಸಂಖ್ಯೆ ಏರಿಕೆ

ಪಿಟಿಐ
Published 15 ಏಪ್ರಿಲ್ 2022, 11:14 IST
Last Updated 15 ಏಪ್ರಿಲ್ 2022, 11:14 IST
ಕೊರೊನಾ ವೈರಸ್
ಕೊರೊನಾ ವೈರಸ್   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವಾರ ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಕೋವಿಡ್‌ ದೃಢ ಪ್ರಮಾಣ (ಪಾಸಿಟಿವಿಟಿ ದರ) ಶೇ 2ರ ಗಡಿ ದಾಟಿದೆ.

ಕಳೆದ ವಾರ ‘ಮನೆಯಲ್ಲಿಯೇ ಪ್ರತ್ಯೇಕವಾಸ’ದ ಪ್ರಕರಣಗಳ ಸಂಖ್ಯೆಯಲ್ಲಿ ಶೇ 48ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತವೆ.

ಗುರುವಾರ ಕೊನೆಗೊಂಡ ಅವಧಿಯಲ್ಲಿ ‘ಮನೆಯಲ್ಲಿ ಪ್ರತ್ಯೆಕವಾಸ’ಕ್ಕೆ ಒಳಗಾಗಿರುವವರ ಸಂಖ್ಯೆ 574 ಇತ್ತು. ಏಪ್ರಿಲ್‌ 1ರಂದು ಶೇ 0.57ರಷ್ಟಿದ್ದಪಾಸಿಟಿವಿಟಿ ದರ ಏ. 14ರಂದು ಶೇ 2.39ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಆತಂಕ ಪಡುವಂತಹ ಸ್ಥಿತಿ ಇಲ್ಲ. ನಿತ್ಯವೂ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆಯೇ ಇದೆ. ಆದರೆ, ಕೋವಿಡ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳ ಪಾಲನೆ ನಿಲ್ಲಿಸಬಾರದು’ ಎಂದು ವೈದ್ಯರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.