ADVERTISEMENT

12ರಿಂದ ನೀಟ್‌–ಪಿಜಿ ಕೌನ್ಸೆಲಿಂಗ್ ಆರಂಭ: ಆರೋಗ್ಯ ಸಚಿವ

ಪಿಟಿಐ
Published 9 ಜನವರಿ 2022, 19:10 IST
Last Updated 9 ಜನವರಿ 2022, 19:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನೀಟ್‌–ಪಿಜಿ ಕೌನ್ಸೆಲಿಂಗ್ ಪ್ರಕ್ರಿಯೆ ಇದೇ 12ರಂದು ಆರಂಭವಾಗಲಿದೆ’ ಎಂದು ಕೇಂದ್ರ ಆರೋಗ್ಯ ಸಚಿವಮನ್‌ಸುಖ್‌ ಮಾಂಡವೀಯ ಭಾನುವಾರ ತಿಳಿಸಿದರು.

ಜನವರಿ 7ರಂದು ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್‌, 2021–22ನೇ ಶೈಕ್ಷಣಿಕ ಸಾಲಿಗೆ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್‌–ಪಿಜಿ ಕೌನ್ಸೆಲಿಂಗ್ ಆರಂಭಿಸಲು ಅನುಮೋದನೆ ನೀಡಿತ್ತು.

ಅಲ್ಲದೆ, ನೀಟ್‌–ಪಿಜಿ ಪ್ರವೇಶಾತಿಗೆ ಇತರೆ ಹಿಂದುಳಿದ ವರ್ಗಗಳಿಗೆ ಶೇ 27 ಮತ್ತು ಇಡಬ್ಲ್ಯೂಎಸ್‌ ವರ್ಗಗಳಿಗೆ ಶೇ 10 ಮೀಸಲಾತಿ ಕಲ್ಪಿಸುವ ನಿರ್ಧಾರವನ್ನೂ ಎತ್ತಿಹಿಡಿದಿತ್ತು.

ADVERTISEMENT

‘ಸ್ಥಾನಿಕ ವೈದ್ಯರಿಗೆ ಭರವಸೆ ನೀಡಿದ್ದಂತೆ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವೈದ್ಯಕೀಯ ಕೌನ್ಸೆಲಿಂಗ್‌ ಸಮಿತಿ ಇದೇ 12ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲಿದೆ’ ಎಂದು ಮಾಂಡವೀಯ ಟ್ವೀಟ್‌ ಮಾಡಿದ್ದಾರೆ.

‘ಈ ಬೆಳವಣಿಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ. ಅಭ್ಯರ್ಥಿಗಳಿಗೆ ಶುಭಾಶಯಗಳು’ ಎಂದು ಸಚಿವರು ತಿಳಿಸಿದ್ದಾರೆ. ನೀಟ್‌–ಪಿಜಿ ಪರೀಕ್ಷೆಯು 2021ರ ಸೆಪ್ಟೆಂಬರ್‌ 11ರಂದು ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.