ADVERTISEMENT

ಮೇ 20ರಂದು ಮತ್ತೊಮ್ಮೆ ‘ನೀಟ್‌’

​ಪ್ರಜಾವಾಣಿ ವಾರ್ತೆ
Published 10 ಮೇ 2019, 16:14 IST
Last Updated 10 ಮೇ 2019, 16:14 IST
   

ನವದೆಹಲಿ: ಹಂಪಿ ಎಕ್ಸ್‌ಪ್ರೆಸ್ ರೈಲು ವಿಳಂಬದಿಂದ ಮೇ 5ರಂದು ನೀಟ್‌ ಪರೀಕ್ಷೆ ತಪ್ಪಿಸಿಕೊಂಡ ಕರ್ನಾಟಕದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಸುಪ್ರೀಂಕೊರ್ಟ್‌ ಶುಕ್ರವಾರ ಸಮ್ಮತಿ ಸೂಚಿಸಿದೆ.

ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಫೋನಿ ಚಂಡಮಾರುತದಿಂದ ವಂಚಿತರಾಗಿದ್ದ ಒಡಿಶಾದ ಏಳು ನಗರಗಳಲ್ಲೂ ಹಾಗೂ ಪಶ್ಚಿಮ ಬಂಗಾಳದ ಸಿಲಿಗುರಿಯ ಕೇಂದ್ರವೊಂದರಲ್ಲಿ ಮೇ 20ರಂದು ಪರೀಕ್ಷೆ ನಡೆಸಲು ನ್ಯಾಯಮೂರ್ತಿಗಳಾದ ಎಸ್‌.ಎ ಬೊಬ್ಡೆ ಹಾಗೂ ಎಸ್. ಅಬ್ದುಲ್ ನಜೀರ್‌ ನೇತೃತ್ವದ ಪೀಠವುಒಪ್ಪಿಗೆ ನೀಡಿದೆ.

ಮೇ 5ಕ್ಕೆ ನಡೆದ ಹಾಗೂ 20ರಂದು ನಡೆಯಲಿರುವ ಪರೀಕ್ಷೆಯ ಫಲಿತಾಂಶವನ್ನು ಒಟ್ಟಿಗೆ ಪ್ರಕಟಿಸಲು ಒಪ್ಪಿಗೆ ನೀಡುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.