ADVERTISEMENT

ನಾಯಿ ಬೊಗಳಿದ್ದಕ್ಕೆ ಹಲ್ಲೆ: ಹೃದಯಾಘಾತವಾಗಿ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 6:56 IST
Last Updated 13 ಫೆಬ್ರುವರಿ 2020, 6:56 IST
   

ಮುಂಬೈ:ನೆರೆಹೊರೆಯವರಿಂದಹಲ್ಲೆಗೊಳಗಾದ 35ರ ಪ್ರಾಯದ ಮಹಿಳೆಯಹೃದಯಾಘಾತದಿಂದ ಮೃತಪಟ್ಟ ಘಟನೆಡಾಂಬಿವೇಲಿಯಲ್ಲಿನಡೆದಿದೆ. ನಾಯಿಬೊಗಳಿದ್ದರಿಂದಕೋಪಗೊಂಡ ನೆರೆಹೊರೆಯವರು ಹಲ್ಲೆನಡೆಸಿದ್ದಾರೆ.

ಮೃತರನ್ನು ಮುಂಬೈನಡಾಂಬಿವೇಲಿನಿವಾಸಿನಾಗಮ್ಮಶೆಟ್ಟಿ ಎಂದು ಗುರುತಿಸಲಾಗಿದ್ದು, ಅವರ ಸಾಕು ನಾಯಿ ನಿರಂತರವಾಗಿಬೊಗಳುತ್ತಿದ್ದರಿಂದಆಕ್ರೋಶಗೊಂಡ ನೆರೆ ಮನೆಯನಾಲ್ವರು ಹಲ್ಲೆ ನಡೆಸಿರುವುದಾಗಿತಿಳಿದು ಬಂದಿದೆ.

ಹಲ್ಲೆಗೊಳಗಾಗಿದ್ದನಾಗಮ್ಮಶೆಟ್ಟಿ ಸ್ಥಳೀಯಪೊಲೀಸರಬಳಿ ದೂರು ದಾಖಲಿಸಿದ್ದಾರೆ.ಪೊಲೀಸರು ಅವರನ್ನು ಆಸ್ಪತ್ರೆಗೆತೆರೆಳುವಂತೆ ಹೇಳಿದ್ದಾರೆ. ಆದರೆ ಅವರು ಮನೆಗೆತೆರೆಳಿದ್ದಾರೆ.ಮನೆಯಲ್ಲಿ ಎದೆನೋವುಕಾಣಿಸಿಕೊಂಡಿದ್ದರಿಂದತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಅವರು ಮೃತಪಟ್ಟಿದ್ದಾರೆ,ಶವ ಪರೀಕ್ಷೆ ವರದಿಯಲ್ಲಿಹೃದಯಾಘಾತದಿಂದಸಾವು ಸಂಭವಿಸಿರುವುದಾಗಿ ತಿಳಿದುಬಂದಿದೆ ಎಂದು ಡಿಸಿಪಿವಿವೇಕ್ಪ್ರಸಾದ್‌ ಹೇಳಿದ್ದಾರೆ.

ADVERTISEMENT

ವಿಧವೆಯಾಗಿದ್ದನಾಗಮ್ಮಶೆಟ್ಟಿ ಮಗಳೊಂದಿಗೆ ವಾಸಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.