ADVERTISEMENT

ಸಿಬಿಎಸ್‌ಇ: 3ರಿಂದ 6ನೇ ತರಗತಿವರೆಗೆ ಹೊಸ ಪಠ್ಯಕ್ರಮ

ಪಿಟಿಐ
Published 23 ಮಾರ್ಚ್ 2024, 16:04 IST
Last Updated 23 ಮಾರ್ಚ್ 2024, 16:04 IST
.
.   

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) 3ರಿಂದ 6ನೇ ತರಗತಿಯವರೆಗೆ ಹೊಸ ಪಠ್ಯಕ್ರಮವನ್ನು ಪ್ರಕಟಿಸಲಿದೆ.

’2024–25ನೇ ಶೈಕ್ಷಣಿಕ ಸಾಲಿನ ಏಪ್ರಿಲ್‌ 1ರಿಂದಲೇ ಈ ಹೊಸ ಪಠ್ಯಕ್ರಮ  ಜಾರಿಯಾಗಲಿದೆ. ಉಳಿದ ತರಗತಿಗಳಿಗೆ ಬದಲಾವಣೆಯಿಲ್ಲ’ ಎಂದು ಸಿಬಿಎಸ್‌ಇ ಅಧಿಕಾರಿಗಳು ತಿಳಿಸಿದ್ದಾರೆ.

‘ಹೊಸ ಪಠ್ಯಕ್ರಮದ ಪುಸ್ತಕಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಎನ್‌ಸಿಇಆರ್‌ಟಿಯು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ತಿಳಿಸಿದೆ’ ಎಂದು ಸಿಬಿಎಸ್‌ಇಯು ತನ್ನ ಅಧೀನದಲ್ಲಿ ಬರುವ ಶಾಲೆಗಳಿಗೆ ಮಾಹಿತಿ ನೀಡಿದೆ.

ADVERTISEMENT

‘ಎನ್‌ಸಿಇಆರ್‌ಟಿ ಪ್ರಕಟಿಸುವ ಹೊಸ ಪಠ್ಯಕ್ರಮವನ್ನೇ ಶಾಲೆಗಳಲ್ಲಿ ಬೋಧಿಸಿ’ ಎಂದು ಸಿಬಿಎಸ್‌ಇಯ ನಿರ್ದೇಶಕ (ಅಕಾಡೆಮಿಕ್ಸ್) ಜೋಸೆಫ್‌ ಇಮ್ಯಾನುಯೆಲ್‌ ಸೂಚಿಸಿದ್ದಾರೆ.

18 ವರ್ಷದ ನಂತರ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ (ಎನ್‌ಸಿಎಫ್‌) ಪರಿಷ್ಕರಣೆ ನಡೆಸುವಂತೆ ಶಿಕ್ಷಣ ಸಚಿವಾಲಯವು ಕಳೆದ ವರ್ಷ ಸೂಚಿಸಿತ್ತು. 1975, 1988, 2000 ಹಾಗೂ 2005ರಲ್ಲಿ ಪರಿಷ್ಕರಣೆ ನಡೆದಿತ್ತು.

ಹಿಂದಿನ ವರ್ಷ ಪಠ್ಯದಿಂದ ಮೊಘಲ್ ಸಾಮ್ರಾಜ್ಯ, ಮೊಘಲ್‌ ನ್ಯಾಯಾಲಯ, 2022ರ ಗುಜರಾತ್ ಗಲಭೆ, ಶೀತರ ಸಮರಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ಕೈಬಿಡಲಾಗಿತ್ತು. ಇದು ರಾಜಕೀಯ ವಿವಾದಕ್ಕೂ ಕಾರಣವಾಗಿತ್ತು. ವಿರೋಧ ಪಕ್ಷಗಳಿಂದ ‘ಇತಿಹಾಸ ಅಳಿಸುವ’ ಪ್ರಕ್ರಿಯೆ ಎಂಬ ಟೀಕೆಯೂ ವ್ಯಕ್ತವಾಗಿತ್ತು.

‘2024–25ನೇ ಶೈಕ್ಷಣಿಕ ಸಾಲಿನಲ್ಲಿ 3ರಿಂದ 6ನೇ ತರಗತಿಯವರೆಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಹೊಸ ಪಠ್ಯಕ್ರಮವನ್ನು ಪ್ರಕಟಿಸಿದೆ. ಏ.1ರಿಂದಲೇ ಇದು ಅನ್ವಯವಾಗಲಿದ್ದು ಉಳಿದ ತರಗತಿಗಳಿಗೆ ಬದಲಾವಣೆಯಿಲ್ಲ’ ಎಂದು ಸಿಬಿಎಸ್‌ಇ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.