ADVERTISEMENT

ಕೇರಳ: ಕಸದ ರಾಶಿಯಿಂದ ನವಜಾತ ಶಿಶುವಿನ ರಕ್ಷಣೆ

ಪಿಟಿಐ
Published 5 ಜನವರಿ 2021, 7:51 IST
Last Updated 5 ಜನವರಿ 2021, 7:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲ್ಲಂ (ಕೇರಳ): ದಕ್ಷಿಣ ಕೇರಳದ ನಡಕ್ಕಲ್‌ನ ಕಸದ ರಾಶಿಯೊಂದರಿಂದ ನವಜಾತ ಶಿಶುವನ್ನು ಮಂಗಳವಾರ ರಕ್ಷಿಸಲಾಗಿದೆ.

ಮನೆಯೊಂದರ ಹಿಂದೆಯಿದ್ದ ಕಸದ ರಾಶಿಯಲ್ಲಿ ಒಂದು ದಿನದ ಗಂಡು ಶಿಶುವನ್ನು ಅಪರಿಚಿತರು ಬಿಟ್ಟುಹೋಗಿದ್ದರು. ಮಂಗಳವಾರ ಬೆಳಿಗ್ಗೆ ಮಗುವಿನ ಆಕ್ರಂದನ ಕೇಳಿದ ಸ್ಥಳೀಯರು, ಮಗುವನ್ನು ಕಸದ ರಾಶಿಯಿಂದ ರಕ್ಷಿಸಿದ್ದಾರೆ. ಈ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು, ನವಜಾತ ಶಿಶುವನ್ನು ಪಾರಿಪಳ್ಳಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದರು ಎಂದು ಮೂಲಗಳು ಹೇಳಿವೆ.

‘ಶಿಶು ಆರೋಗ್ಯವಾಗಿದ್ದು, ಮೂರು ಕೆ.ಜಿ ತೂಕ ಹೊಂದಿದೆ. ಹಸುಳೆಯನ್ನು ಕಸದ ರಾಶಿಯಲ್ಲಿ ಬಿಟ್ಟುಹೋದವರು ಯಾರೆಂದು ಗೊತ್ತಾಗಿಲ್ಲ. ನಾವು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದೇವೆ. ಆದಷ್ಟು ಬೇಗ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರ ಮಾಡುತ್ತೇವೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.