ಮದುರೈ: ಡಿಎಂಕೆಗೆ ಮರು ಸೇರ್ಪಡೆ ಕುರಿತು ಮೌನವಹಿಸಿದ್ದ ಉಚ್ಛಾಟಿತ ನಾಯಕ ಎಂ.ಕೆ. ಅಳಗಿರಿ ಅವರು, ಈ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಪ್ರಕಟಿಸುವುದಾಗಿ ಸೋಮವಾರ ಹೇಳಿದ್ದಾರೆ.
ಕಳೆದ ವಾರ ರ‍್ಯಾಲಿ ನಡೆಸುವ ಮೂಲಕ ತಮ್ಮ ಶಕ್ತಿಪ್ರದರ್ಶನ ಮಾಡಿದ್ದರು.
ಪಕ್ಷದ ಅಧಿಕಾರಕ್ಕಾಗಿ ಕಿರಿಯ ಸಹೋದರ ಹಾಗೂ ಈಗಿನ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಕಿತ್ತಾಟ ನಡೆಸಿದ್ದರಿಂದ ಕರುಣಾನಿಧಿ ಅವರು 2014ರಲ್ಲಿ ಅಳಗಿರಿಯವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.