ADVERTISEMENT

ಗುಜರಿ ವ್ಯಾಪಾರಿಗಳ ಒತ್ತುವರಿ ತೆರವು: ಎನ್‌ಜಿಟಿ ಆದೇಶ

ಪಿಟಿಐ
Published 11 ಮಾರ್ಚ್ 2019, 12:44 IST
Last Updated 11 ಮಾರ್ಚ್ 2019, 12:44 IST

ನವದೆಹಲಿ: ಗುಜರಿ ವ್ಯಾಪಾರಿಗಳು ಇಲ್ಲಿನ ಆರ್‌.ಕೆ.ಪುರದಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಗೋದಾಮು ಮತ್ತು ಅಂಗಡಿ ಮಳಿಗೆಗಳನ್ನು ತಕ್ಷಣ ತೆರವುಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪೊಲೀಸರಿಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ರಘುವೇಂದ್ರ ಎಸ್‌. ರಾಥೋಡ್‌ ನೇತೃತ್ವದ ಪೀಠವು, ಒತ್ತುವರಿ ಬಗ್ಗೆ ಮಹಾನಗರ ಪಾಲಿಕೆ ಮಾಹಿತಿ ನೀಡಿದ ತಕ್ಷಣ ಸ್ಥಳೀಯ ಠಾಣೆ ಪೊಲೀಸ್‌ ಅಧಿಕಾರಿ ಒತ್ತುವರಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ಗುಜರಿ ವ್ಯಾಪಾರಿಗಳು ಕೆ.ಆರ್‌.‍ಪುರದ ಸೆಕ್ಟರ್‌ 1ರಲ್ಲಿ ನಡೆಸುತ್ತಿರುವ ಅನಧಿಕೃತ ವಾಣಿಜ್ಯ ಚಟುವಟಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಗಟ್ಟುವಂತೆ ಕೋರಿ ಖುಷಿ ಸೇವಾ ಸಂಸ್ಥಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಈ ಪೀಠ ವಿಚಾರಣೆ ನಡೆಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.