ADVERTISEMENT

ಅಟ್ಟಾರಿ ಡಗ್ಸ್‌ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ 

ಪಿಟಿಐ
Published 22 ಮಾರ್ಚ್ 2024, 15:39 IST
Last Updated 22 ಮಾರ್ಚ್ 2024, 15:39 IST
   

ನವದೆಹಲಿ: ಪಂಜಾಬ್‌ನ ಅಟ್ಟಾರಿಯಲ್ಲಿ ಸುಮಾರು ₹700 ಕೋಟಿ ಮೌಲ್ಯದ 102 ಕೆ.ಜಿ. ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ಅಧಿಕೃತ ಹೇಳಿಕೆ ಶುಕ್ರವಾರ ತಿಳಿಸಿದೆ. 

ಪಂಜಾಬ್‌ನ ಫಿರೋಜ್‌ಪುರದ ದೀಪಕ್ ಖುರಾನಾ ಅಲಿಯಾಸ್ ದೀಪು ಮತ್ತು ದೆಹಲಿಯ ಜಾಮಿಯಾ ನಗರದ ಅವತಾರ್ ಸಿಂಗ್ ಅಲಿಯಾಸ್ ಸನ್ನಿ ಬಂಧಿತರು. ಪ್ರಕರಣದಲ್ಲಿ ಈವರೆಗೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದಂತಾಗಿದೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.

ಅಫ್ಗಾನಿಸ್ತಾನದಿಂದ ಅಮೃತಸರದ ಅಟ್ಟಾರಿ ಐಸಿಪಿ ಮೂಲಕ ದೇಶಕ್ಕೆ ಕಳ್ಳಸಾಗಣೆಯಾಗುತ್ತಿದ್ದ ಡ್ರಗ್ಸ್ ಅನ್ನು 2022ರ ಏಪ್ರಿಲ್ 24 ಮತ್ತು 26 ರಂದು ಕಸ್ಟಮ್ಸ್ ಇಲಾಖೆಯು ಜಪ್ತಿ ಮಾಡಿತ್ತು.

ADVERTISEMENT

ತಲೆ ಮರೆಸಿಕೊಂಡಿರುವ ಆರೋಪಿ, ದುಬೈ ಮೂಲದ ಶಹೀದ್‌ ಅಹ್ಮದ್‌ ಅಲಿಯಾಸ್‌ ಖಾಜಿ ಅಬ್ದುಲ್ ವಾದೂದ್‌ ನಿರ್ದೇಶನದಂತೆ, ಅಫ್ಗಾನಿಸ್ತಾನದ ಮಜರ್‌–ಎ–ಷರೀಫ್‌ ನಗರ ನಿವಾಸಿ ನಜೀರ್‌ ಅಹ್ಮದ್‌ ಕಾನಿ ಎಂಬಾತ ಭಾರತಕ್ಕೆ ಈ ಡ್ರಗ್ಸ್‌ ಕಳುಹಿಸಿದ್ದ. ಈ ಡ್ರಗ್ಸ್‌, ರಜಿ ಹೈದರ್ ಝೈದಿ ಎಂಬಾತನಿಗೆ ತಲುಪಿಸಿದ ನಂತರ, ಅದನ್ನು ದೇಶದ ವಿವಿಧ ಭಾಗಗಳಿಗೆ ವಿತರಣೆ ಮಾಡುವ ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಎನ್‌ಐಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.