ADVERTISEMENT

ಪಶ್ಚಿಮ ಬಂಗಾಳ: ಅಲ್‌ಖೈದಾ ಸಂಚುಕೋರನ ಬಂಧನ

ಪಿಟಿಐ
Published 2 ನವೆಂಬರ್ 2020, 14:22 IST
Last Updated 2 ನವೆಂಬರ್ 2020, 14:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಅಲ್‌ಖೈದಾ ಸಂಚುಕೋರನಾಗಿ ಕೆಲಸ ಮಾಡುತ್ತಿದ್ದ ಮದರಸಾದ ಶಿಕ್ಷಕನನ್ನು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಅಬ್ದುಲ್ ಮೊಮಿನ್ ಮಂಡಲ್ (32) ಎಂಬಾತನನ್ನು ಭಾನುವಾರ ಬಂಧಿಸಲಾಗಿದೆ ಎಂದು ಎನ್ಐಐ ವಕ್ತಾರ ಮಾಹಿತಿ ನೀಡಿದ್ದಾರೆ.

ಮುರ್ಷಿದಾಬಾದ್‌ನ ರಾಯ್‌ಪುರ ದಾರುರ್ ಹುಡಾ ಇಸ್ಲಾಮಿಯಾ ಮದರಸಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮಂಡಲ್, ಅಲ್-ಖೈದಾ ಸದಸ್ಯರು ಕರೆದಿದ್ದ ಪಿತೂರಿ ಸಭೆಗಳಲ್ಲಿ ಸರಣಿಯಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಈ ಗುಂಪು ಭಾರತದ ವಿವಿಧೆಡೆ ರಾಷ್ಟ್ರವಿರೋಧಿ ಮತ್ತು ಭಯೋತ್ಪಾದನಾ ಚಟುವಟಿಕೆ ನಡೆಸಲು ಸಂಚು ರೂಪಿಸುತ್ತಿತ್ತು ಎಂದು ಅಧಿಕಾರಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT