ADVERTISEMENT

ನೀರವ್‌ ಮೋದಿಯ ದುಬಾರಿ ಸರಕು ಹರಾಜಿಗೆ

ಕಾರು, ಕೈಗಡಿಯಾರ, ಕಲಾಕೃತಿಗಳಿಗೆ ಇಂದು ಬಿಡ್ಡಿಂಗ್

ಪಿಟಿಐ
Published 26 ಫೆಬ್ರುವರಿ 2020, 19:57 IST
Last Updated 26 ಫೆಬ್ರುವರಿ 2020, 19:57 IST
ನೀರವ್ ಮೋದಿ
ನೀರವ್ ಮೋದಿ   

ಮುಂಬೈ: ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ ಅಪರೂಪದ ಚಿತ್ರ ಕಲಾಕೃತಿ, ದುಬಾರಿ ಕೈಗಡಿಯಾರ, ಐಷಾರಾಮಿ ಕಾರುಗಳನ್ನು ಗುರುವಾರಹರಾಜಿಗೆ ಇಡಲಾಗುವುದು.

ಜಾರಿ ನಿರ್ದೇಶನಾಲಯದ ಪರವಾಗಿ ಅಂತರರಾಷ್ಟ್ರೀಯ ಹರಾಜು ಸಂಸ್ಥೆ ಸಫ್ರೋನಾರ್ಟ್ 112 ವಸ್ತುಗಳನ್ನು ನೇರ ಹರಾಜು ಹಾಕುತ್ತಿದೆ. ಮುಂದಿನ ವಾರ ಆನ್‌ಲೈನ್‌ನಲ್ಲೂ ಹರಾಜು ಪ್ರಕ್ರಿಯೆ ನಡೆಯಲಿದೆ.ಕಳೆದ ಮಾರ್ಚ್ ತಿಂಗಳಲ್ಲಿ ಕೆಲ ಕಲಾಕೃತಿಗಳನ್ನು ಸಂಸ್ಥೆ ಯು ಹರಾಜಿನಲ್ಲಿ ಮಾರಾಟ ಮಾಡಿತ್ತು.

ಅಮೃತಾ ಶೇರ್ಗಿಲ್ ಚಿತ್ರಿಸಿರುವ ‘ಬಾಯ್ಸ್ ವಿತ್ ಲೆಮನ್ಸ್’ ಹೆಸರಿನ ಕಲಾಕೃತಿ ನೇರ ಹರಾಜಿನಲ್ಲಿ ಗಮನ ಸೆಳೆಯುವ ಸಾಧ್ಯತೆಯಿದೆ. ಇದು ₹12ರಿಂದ ₹18 ಕೋಟಿಗೆ ಬಿಕರಿಯಾಗಬಹುದು ಎಂದು ಅಂದಾಜಿಸಲಾಗಿದೆ. 1972ರಲ್ಲಿ ಎಂ.ಎಫ್. ಹುಸೇನ್‌ ರಚಿಸಿದ್ದ ಕಲಾಕೃತಿಯೂ ಇಷ್ಟೇ ಮೊತ್ತಕ್ಕೆ ಖರೀದಿಯಾಗುವ ಸಾಧ್ಯತೆಯಿದೆ ಎಂದು ಸಫ್ರೊನಾರ್ಟ್ ತಿಳಿಸಿದೆ.ವಿ.ಎಸ್. ಗಾಯ್ತೊಂಡೆ, ಮಂಜಿತ್ ಬಾವಾ ಮತ್ತು ರಾಜ ರವಿವರ್ಮ ಅವರ ಪೇಂಟಿಂಗ್‌ಗಳೂ ಈ ಪಟ್ಟಿಯಲ್ಲಿವೆ.

ADVERTISEMENT

ಜೇಗರ್ ಲೆಕೌಟ್ರೆ ಕಂಪನಿಯ ‘ರೆವರ್ಸೋ ಗೈರೊಟೂರ್ನಿಲನ್–2’ ಹೆಸರಿನ ಕೈಗಡಿಯಾರ ಹಾಗೂ ಪಟೇಕ್ ಫಿಲಿಪ್‌ ಕಂಪನಿಯ ಚಿನ್ನ ಮತ್ತು ವಜ್ರದ ಗಡಿಯಾರಗಳು ತಲಾ ₹70 ಲಕ್ಷಕ್ಕೆ ಹರಾಜಾಗಬಹುದು.

ಕಾರುಗಳ ಪೈಕಿ ರೋಲ್ಸ್ ರಾಯ್ಸ್ ಘೋಸ್ಟ್ ₹95 ಲಕ್ಷಕ್ಕೆ ಮಾರಾಟವಾಬಹುದು. ಕೈಚೀಲಗಳು, ಫ್ರಾನ್ಸ್‌ನ ದುಬಾರಿ ವಸ್ತುಗಳನ್ನು ಹರಾಜಿಗಿಡಲಾಗಿದೆ.ಆನ್‌ಲೈನ್ ಹರಾಜಿನಲ್ಲಿ ಪೋಶೆ ಪನಮೆರಾ ಎಸ್‌ ಕಾರು ಮಾರಾಟಕ್ಕೆ ಇದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹14 ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನೀರವ್ ಮೋದಿಯನ್ನು ಲಂಡನ್‌ನಲ್ಲಿ ಬಂಧಿಸಿ, ಜೈಲಿನಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.