ADVERTISEMENT

ಬ್ರಿಟನ್ ರಾಜಕೀಯ ಆಶ್ರಯಕ್ಕೆ ನೀರವ್‌ ಮೋದಿ ಯತ್ನ: ಕೇಂದ್ರಕ್ಕೆ ಮಾಹಿತಿ ಇಲ್ಲ

ಪಿಟಿಐ
Published 4 ಜುಲೈ 2018, 19:32 IST
Last Updated 4 ಜುಲೈ 2018, 19:32 IST
   

ನವದೆಹಲಿ: ‘ಬ್ಯಾಂಕ್‌ಗೆ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ ಪಡೆಯಲು ಪ್ರಯತ್ನಿಸುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿಲ್ಲ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜಕೀಯ ಆಶ್ರಯ ನೀಡುವಂತೆ ನೀರವ್‌ ಬ್ರಿಟನ್‌ಗೆ ಕೋರಿಕೆ ಸಲ್ಲಿಸಿದ್ದಾರೆ. ಅಲ್ಲದೆ, ಕೆಲವು ವಾರಗಳ ಹಿಂದಷ್ಟೇ ಬ್ರಿಟನ್‌, ಫ್ರಾನ್ಸ್‌ ಮತ್ತು ಬೆಲ್ಜಿಯಂಗೆ ಅವರು ಭೇಟಿ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹13 ಸಾವಿರ ಕೋಟಿ ವಂಚಿಸಿರುವ ಪ್ರಕರಣದಲ್ಲಿ ನೀರವ್‌, ಸಿಬಿಐಗೆ ಬೇಕಾಗಿರುವ ಪ್ರಮುಖ ಆರೋಪಿ. ನೀರವ್‌ ಮೋದಿ, ಅವರ ಸಹೋದರ ನಿಶಾಲ್‌ ಮೋದಿ ಹಾಗೂ ಅವರ ಕಂಪನಿ ಉದ್ಯೋಗಿ ಸುಭಾಷ್‌ ಪರಬ್‌ ವಿರುದ್ಧಸಿಬಿಐ ಕೋರಿಕೆಯಂತೆ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ.

ADVERTISEMENT

ಸಿಬಿಐ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ನೀರವ್ ಮತ್ತು ಅವರ ಪತ್ನಿ, ಅವರ ಚಿಕ್ಕಪ್ಪ, ಸಹೋದರ ದೇಶ ತೊರೆದಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.