ADVERTISEMENT

ನಿರ್ಭಯಾ ಪ್ರಕರಣ: ಕ್ಷಮಾದಾನಕ್ಕೆ ಅರ್ಜಿ ಹಾಕಲು ಅಪರಾಧಿಗಳಿಗೆ 7 ದಿನ ಅವಕಾಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 7:29 IST
Last Updated 1 ನವೆಂಬರ್ 2019, 7:29 IST
‘ನಿರ್ಭಯ ಪ್ರಕರಣ’ದ ಅಪರಾಧಿಗಳು... ಅಕ್ಷಯ್ ಠಾಕೂರ್, ವಿನಯ್‌ ಶರ್ಮಾ, ಪವನ್ ಗುಪ್ತ ಮತ್ತು ಮುಖೇಶ್ ಸಿಂಗ್.
‘ನಿರ್ಭಯ ಪ್ರಕರಣ’ದ ಅಪರಾಧಿಗಳು... ಅಕ್ಷಯ್ ಠಾಕೂರ್, ವಿನಯ್‌ ಶರ್ಮಾ, ಪವನ್ ಗುಪ್ತ ಮತ್ತು ಮುಖೇಶ್ ಸಿಂಗ್.   

‘ಪ್ರಕರಣಕ್ಕೆ ಸಂಬಂಧಿಸಿದಂತೆನಿಮ್ಮ ವಿಚಾರಣೆ ಮತ್ತು ಕಾನೂನು ಪ್ರಕ್ರಿಯೆಗಳು ಮುಗಿದಿವೆ. ನಿಮ್ಮೆದುರು ಒಂದು ಕೊನೆಯ ಆಯ್ಕೆ ಇದೆ. ನೀವು ಕ್ಷಮಾದಾನ ಕೋರಿ 7 ದಿನಗಳ ಒಳಗೆರಾಷ್ಟ್ರಪತಿಗೆ ಅರ್ಜಿ ಹಾಕಬಹುದು’ ಎಂದು ನೊಟೀಸ್‌ನಲ್ಲಿ ಅಧಿಕಾರಿಗಳು ಸೂಚಿಸಿದ್ದಾರೆ.

‘ಒಂದು ವೇಳೆ ನೀವು ರಾಷ್ಟ್ರಪತಿಗೆ ಕ್ಷಮಾದಾನಅರ್ಜಿ ಸಲ್ಲಿಸದಿದ್ದರೆ ನಿಮಗೆ ಕ್ಷಮಾದಾನ ಕೋರುವ ಆಸಕ್ತಿಯಿಲ್ಲವೆಂಬ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ. ನಿಮ್ಮ ವಿರುದ್ಧ ನ್ಯಾಯಾಲಯ ನೀಡಿರುವ ತೀರ್ಪಿನ ಜಾರಿಗೆಮುಂದಿನ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ’ ಎಂದು ನೊಟೀಸ್ ಹೇಳಿದೆ.

ADVERTISEMENT

ಓರ್ವ ಅಪರಾಧಿ ಸಲ್ಲಿಸುವ ಅರ್ಜಿ ಎಲ್ಲ ನಾಲ್ವರಿಗೂ ಅನ್ವಯವಾಗಲಿದೆ.

‘ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಅಪರಾಧಿಗಳ ಎದುರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನೊಟೀಸ್‌ ಓದಲಾಗಿದೆ. ಈ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡ್‌ ಸಹ ಮಾಡಿಕೊಂಡಿದ್ದೇವೆ’ ಎಂದು ತಿಹಾರ್ ಜೈಲಿನ ಮಹಾ ನಿರ್ದೇಶಕ ಸಂದೀಪ್ ಗೊಯೆಲ್ ಹೇಳಿದ್ದಾರೆ.

ಅ.29ರಂದು ನೊಟೀಸ್‌ ಪ್ರತಿಯನ್ನು ಅಪರಾಧಿಗಳಿಗೆ ನೀಡಲಾಗಿದೆ.

ಅಪರಾಧಿಗಳಿಗೆನೊಟೀಸ್‌ ನೀಡಿರುವ ಮಾಹಿತಿಯನ್ನು ತಿಹಾರ್‌ ಜೈಲಿನ ಅಧಿಕಾರಿಗಳು ಮರಣದಂಡನೆ ವಿಧಿಸಿದ ನ್ಯಾಯಾಲಯಕ್ಕೆನೀಡಿ, ವಾರಂಟ್ ಪಡೆದುಕೊಳ್ಳಲಿದ್ದಾರೆ. ಇತ್ತ ಜೈಲಿನಲ್ಲಿ ನೊಟೀಸ್‌ಸಿಕ್ಕ ನಂತರ ಅಪರಾಧಿಗಳು ಉದ್ವಿಗ್ನರಾಗಿದ್ದಾರೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವಸಂತ್ರಸ್ತ ಯುವತಿಯ ತಾಯಿ, ‘ಜೈಲು ಅಧಿಕಾರಿಗಳ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಏಳು ವರ್ಷಗಳ ನಂತರ ನನ್ನ ಮಗಳಿಗೆ ನ್ಯಾಯ ಸಿಗಲಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ಎಲ್ಲರಿಗೂ ಇದು ಒಂದು ಪಾಠ’ ಎಂದು ಹೇಳಿದ್ದಾರೆ.

ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಪ್ರತಿಕ್ರಿಯಿಸಿ, ತಿಹಾರ್ ಅಭಿವೃದ್ಧಿ ಮಂಡಳಿಯಿಂದ ಈ ಕುರಿತು ಮಾಹಿತಿ ಸಿಕ್ಕಿದೆ. ನಾನು ಅಕ್ಷಯ ಠಾಕೂರ್ ಪರವಾಗಿ ಮೊದಲು ಕ್ಷಮಾದಾನ ಅರ್ಜಿ ಸಲ್ಲಿಸುತ್ತೇನೆ. ನಂತರ ಇತರರ ಪರವಾಗಿಯೂ ಅರ್ಜಿ ಹಾಕುತ್ತೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.