ನಿತಿನ್ ಗಡ್ಕರಿ
–ಪಿಟಿಐ ಚಿತ್ರ
ಮುಂಬೈ: ‘ಯಾರು ಜನರನ್ನು ಅಚ್ಚುಕಟ್ಟಾಗಿ ಮೂರ್ಖರನ್ನಾಗಿ ಮಾಡಬಲ್ಲರೋ, ಅವರೇ ಅತ್ಯುತ್ತಮ ನಾಯಕ ಎಂದೆನಿಸಿಕೊಳ್ಳುತ್ತಾರೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಅಖಿಲ ಭಾರತೀಯ ಮಹಾನುಭಾವ ಪರಿಷದ್‌ನ ಕಾರ್ಯಕ್ರಮದಲ್ಲಿ ಗಡ್ಕರಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಅವರು, ‘ನಾನು ಕೆಲಸ ಮಾಡುವ ಕ್ಷೇತ್ರದಲ್ಲಿ ಮುಕ್ತವಾಗಿ ಸತ್ಯ ಮಾತನಾಡುವುದನ್ನು ನಿರ್ಬಂಧಿಸಲಾಗಿದೆ. ಎಲ್ಲರಿಗೂ ಅವರದ್ದೇ ಆದ ಉದ್ದೇಶಗಳಿವೆ. ಕೊನೆಗೆ ಯಾರು ಜನರನ್ನು ಅಚ್ಚುಕಟ್ಟಾಗಿ ಮೂರ್ಖರನ್ನಾಗಿ ಮಾಡಬಲ್ಲರೋ, ಅವರೇ ಅತ್ಯುತ್ತಮ ನಾಯಕ ಎಂದೆನಿಸಿಕೊಳ್ಳುತ್ತಾರೆ. ಆದರೆ, ಒಂದು ಮಾತ್ರ ಸತ್ಯ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿರುವಂತೆ ಅಂತಿಮ ವಿಜಯ ಎಂದಿಗೂ ಸತ್ಯದ್ದೇ ಆಗಿರಲಿದೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಸತ್ಯ ಮತ್ತು ನ್ಯಾಯದ ಮಾರ್ಗದಲ್ಲಿ ಬದುಕುವಂತೆ ಜನರಿಗೆ ಗಡ್ಕರಿ ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.