
ನವದೆಹಲಿ: ‘ಭಾರತದ ಸಂವಿಧಾನವು ದೇಶದ ಆತ್ಮವಾಗಿದೆ. ಇದು ಸ್ವಾತಂತ್ರ್ಯಾ ನಂತರ ದೇಶವನ್ನು ಬಲಿಷ್ಠವಾದ, ಎಲ್ಲರನ್ನೂ ಒಳಗೊಂಡಂತಹ ಪ್ರಜಾಪ್ರಭುತ್ವ, ಗಣರಾಜ್ಯವಾಗಿ ಮುಂದುವರಿಯಲು ನಿರ್ದೇಶಿಸಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ತಿಳಿಸಿದರು.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ಜನರಿಗೆ ಶುಭ ಕೋರಿರುವ ಅವರು, ‘ಶ್ರೇಷ್ಠ ಸಂವಿಧಾನದ ಕಾರಣ ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ವಿಶಿಷ್ಟ ಗುರುತನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಆತ್ಮವಿಶ್ವಾಸದಿಂದ ಕೂಡಿದ್ದು, ನಿರ್ಣಾಯಕ ದೇಶವಾಗಿ ಹೊರಹೊಮ್ಮುತ್ತಿದೆ’ ಎಂದು ಹೇಳಿದರು.
ಗಣರಾಜ್ಯೋತ್ಸವದ ಸಂದರ್ಭವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿದ ಮೌಲ್ಯಗಳನ್ನು ಸ್ಮರಿಸುವ ದಿನವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಸಂವಿಧಾನ ನಿರ್ಮಾತೃಗಳ ದೂರದೃಷ್ಟಿ ಮತ್ತು ದೇಶದ ಭದ್ರತೆಗೆ ಸಮರ್ಪಿತವಾದ ಸಶಸ್ತ್ರ ಪಡೆಗಳ ಧರ್ಯಕ್ಕೆ ಗೌರವ ಸಲ್ಲಿಸುವ ದಿನವೂ ಇದಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.