ADVERTISEMENT

ಸಚಿವರ ದೇಗುಲ ಪ್ರವೇಶ ವಿವಾದ: ನಿತೀಶ್‌ ಬೇಸರ

ಪಿಟಿಐ
Published 24 ಆಗಸ್ಟ್ 2022, 11:26 IST
Last Updated 24 ಆಗಸ್ಟ್ 2022, 11:26 IST
ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌
ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌   

ಪಟನಾ (ಪಿಟಿಐ): ಸಚಿವ ಇಸ್ರೇಲ್ ಅಹ್ಮದ್‌ ಮನ್ಸೂರಿ ಅವರೊಂದಿಗೆ ಗಯಾ ದೇಗುಲಕ್ಕೆ ಭೇಟಿ ನೀಡಿದ್ದು ವಿವಾದದ ಸ್ವರೂಪ ಪಡೆದಿರುವ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಬುಧವಾರ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರು (ಬಿಜೆಪಿ) ಅನವಶ್ಯಕ ವಿಷಯಗಳನ್ನು ಎಳೆದುತಂದು ಸಮಾಜವನ್ನು ಒಡೆಯಲು ಬಯಸಿದ್ದಾರೆ. ದೇಗುಲಕ್ಕೆ ಭೇಟಿ ನೀಡಿದ್ದರಲ್ಲಿ ಗೊಣಗುವಂಥದ್ದು ಏನಿದೆ? ಅವರ ಸಚಿವರು ನನ್ನೊಂದಿಗೆ ದೇಗುಲಕ್ಕೆ ಭೇಟಿ ನೀಡಿಲ್ಲವೇ’ ಎಂದು ಪ್ರಶ್ನಿಸಿದರು.

ನಿತೀಶ್‌ ಕುಮಾರ್‌ ಅವರು ಗಯಾದ ವಿಷ್ಣುಪಾದ ದೇವಾಲಯಕ್ಕೆ ಮಾಹಿತಿ ತಂತ್ರಜ್ಞಾನ ಸಚಿವ ಮನ್ಸೂರಿ ಅವರೊಂದಿಗೆ ಪ್ರವೇಶಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.