ADVERTISEMENT

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ: ನೀತಿ ಆಯೋಗಕ್ಕೆ ಪತ್ರ ಬರೆದ ನಿತೀಶ್ ಸರ್ಕಾರ

ಪಿಟಿಐ
Published 12 ಡಿಸೆಂಬರ್ 2021, 16:27 IST
Last Updated 12 ಡಿಸೆಂಬರ್ 2021, 16:27 IST
ನಿತೀಶ್‌ ಕುಮಾರ್‌
ನಿತೀಶ್‌ ಕುಮಾರ್‌   

ಪಟ್ನಾ: ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಮೂಲಕ ಹೆಚ್ಚಿನ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿನಿತೀಶ್ ಕುಮಾರ್ ಸರ್ಕಾರ ನೀತಿ ಆಯೋಗಕ್ಕೆ ಪತ್ರ ಬರೆದಿದೆ.

ಇದು 10–12 ವರ್ಷಗಳ ಹಳೆಯ ಬೇಡಿಕೆಯಾಗಿದ್ದು, ಇದನ್ನು ಕೂಡಲೇ ಈಡೇರಿಸಬೇಕು ಎಂದು ಬಿಹಾರದ ಯೋಜನೆ ಮತ್ತು ಅನುಷ್ಠಾನ ಖಾತೆ ರಾಜ್ಯ ಸಚಿವ ಬಿಜೇಂದ್ರ ಯಾದವ್ ಅವರು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಬಿಹಾರವು ವಿಶೇಷ ಸ್ಥಾನಮಾನ ಪ‍ಡೆಯಲು ಬೇಕಾದ ಎಲ್ಲಾ ಮಾನದಂಡಗಳನ್ನು ಹೊಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ನೀತಿ ಆಯೋಗವು ಈಚೆಗೆ ಬಿಡುಗಡೆ ಮಾಡಿದ ಬಹು ಆಯಾಮದ ಬಡತನ ಸೂಚ್ಯಂಕ ವರದಿಯಲ್ಲಿ ಬಿಹಾರವು ಕೊನೆಯ ಸ್ಥಾನ ಪಡೆದಿತ್ತು.

ADVERTISEMENT

ಬಿಹಾರ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು ನೈಸರ್ಗಿಕ ಸಂಪನ್ಮೂಲಗಳು ವಿರಳವಾಗಿವೆ. ಅರ್ಧಕ್ಕಿಂತ ಹೆಚ್ಚಿನ ಜಿಲ್ಲೆಗಳಲ್ಲಿ ಬರ ಮತ್ತು ಪ್ರವಾಹ ಪರಿಣಾಮ ಬೀರಿರುವುದರಿಂದತಲಾ ಆದಾಯ, ಸುಲಭ ಜೀವನ ಮತ್ತು ಮಾನವ ಅಭಿವೃದ್ಧಿಯಂತಹ ಸೂಚ್ಯಂಕಗಳಲ್ಲಿ ಬಿಹಾರ ರಾಷ್ಟ್ರೀಯ ಸರಾಸರಿಗಿಂತ ಕೆಳಗಿದೆ ಎಂದು ಸಚಿವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಪೂರಕವಾಗುವಂತೆಸಾರ್ವಜನಿಕ ವಲಯದ ಘಟಕಗಳನ್ನು ಸ್ಥಾಪಿಸಲು ಕೇಂದ್ರದ ಕಡೆಯಿಂದ ಉಪಕ್ರಮದ ಕೊರತೆ ಇದೆ ಎಂದು ಸಚಿವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.