ನವದೆಹಲಿ: ದೇಶದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಮಹಾ ನಿರ್ದೇಶಕ ಡಾ. ರಾಜೀವ್ ಬಹಲ್, ’ಸೋಂಕಿನ ತೀವ್ರತೆಯು ಸದ್ಯ ಅಲ್ಪ ಪ್ರಮಾಣದಲ್ಲಿದೆ ಮತ್ತು ಭಯಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.
ಹೊಸ ಕೋವಿಡ್ ರೂಪಾಂತರಿಗಳನ್ನು ಗುರುತಿಸಿರುವ ಬಗ್ಗೆ ಮಾತನಾಡಿದ ಅವರು, ‘ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಮಾದರಿಗಳ ರೂಪಾಂತರಿ ಅನುಕ್ರಮದಲ್ಲಿ (ಜಿನೋಮ್ ಸೀಕ್ವೆನ್ಸಿಂಗ್) ಹೊಸ ಉಪತಳಿಗಳು ಪತ್ತೆಯಾಗಿವೆ. ಅವುಗಳನ್ನು ಎಲ್‌ಎಫ್.7, ಎಕ್ಸ್‌ಎಫ್‌ಜಿ, ಜೆಎನ್.1 ಮತ್ತು ಎನ್‌ಬಿ 1.8.1 ಎಂದು ಗುರುತಿಸಲಾಗಿದೆ. ಅವು ಒಮಿಕ್ರಾನ್ ಉಪ ತಳಿಗಳಾಗಿದ್ದು, ಮಾರಣಾಂತಿಕವಲ್ಲ ಎಂದು ಗೊತ್ತಾಗಿದೆ’ ಎಂದಿದ್ದಾರೆ.
ಮೊದಲ ಮೂರು ರೂಪಾಂತರಿಗಳು ವ್ಯಾಪಕವಾಗಿವೆ. ಮತ್ತಷ್ಟು ಪ್ರದೇಶಗಳ ಮಾದರಿಗಳನ್ನು ಸೀಕ್ವೆನ್ಸ್ ಮಾಡಲಾಗುತ್ತಿದೆ. ಇನ್ನೂ ರೂಪಾಂತರಿಗಳು ಇವೆಯೇ ಎಂಬುದು ಎರಡು–ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.