ADVERTISEMENT

35ಎ ವಿಧಿ ರದ್ಧತಿ; ಚುನಾಯಿತ ಸರ್ಕಾರಕ್ಕಷ್ಟೇ ಅಧಿಕಾರ

ಪಿಟಿಐ
Published 24 ಫೆಬ್ರುವರಿ 2019, 16:41 IST
Last Updated 24 ಫೆಬ್ರುವರಿ 2019, 16:41 IST
ಕಾಶ್ಮೀರ ರಾಜ್ಯಪಾಲ
ಕಾಶ್ಮೀರ ರಾಜ್ಯಪಾಲ   

ಜಮ್ಮು:‘ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದ 35ಎ ವಿಧಿಯ ಬಗ್ಗೆ ಚುನಾಯಿತ ಸರ್ಕಾರ ಮಾತ್ರ ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಾಡಳಿತವು ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಶಾಶ್ವತ ನಿವಾಸಿಗಳನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ರಾಜ್ಯದ ವಿಧಾನಸಭೆಗೆ ಸಂವಿಧಾನದ 35ಎ ವಿಧಿ ನೀಡುತ್ತದೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನೂ ಈ ವಿಧಿ ಒದಗಿಸುತ್ತದೆ. ಈ ವಿಧಿಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆಜಮ್ಮು ಮತ್ತು ಕಾಶ್ಮೀರ ರಾಜ್ಯಾಡಳಿತವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

‘ಈಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. ಹೀಗಾಗಿ ಈ ಸಂಬಂಧ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ವಿಚಾರಣೆ ಮುಂದುವರಿಸಬೇಕು’ ಎಂದು ರಾಜ್ಯಾಡಳಿತವು ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವನ್ನು ತಿಳಿಸಿದೆ.

ADVERTISEMENT

ಗಾಬರಿಯಾಗುವ ಅವಶ್ಯಕತೆ ಇಲ್ಲ:‘35ಎ ವಿಧಿಯನ್ನು ರದ್ದುಪಡಿಸಲಾಗುತ್ತದೆ ಎಂಬ ವದಂತಿ ರಾಜ್ಯದಲ್ಲಿ ಹರಿದಾಡುತ್ತಿದೆ. ಜನರು ಇದನ್ನು ನಂಬುವ ಅವಶ್ಯಕತೆ ಇಲ್ಲ’ ಎಂದು ರಾಜ್ಯಾಡಳಿತದ ವಕ್ತಾರ ರೋಹಿತ್ ಕನ್ಸಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.