ADVERTISEMENT

ನೋಯ್ಡಾ: ಗ್ಯಾಂಗ್‌ಸ್ಟರ್‌ ಗುಂಪಿಗೆ ಸೇರಿದ ₹1 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ

ಪಿಟಿಐ
Published 13 ಡಿಸೆಂಬರ್ 2023, 4:56 IST
Last Updated 13 ಡಿಸೆಂಬರ್ 2023, 4:56 IST
   

ನೋಯ್ಡಾ: ಗ್ಯಾಂಗ್‌ಸ್ಟರ್‌ ಕಾಯ್ದೆ ಅಡಿಯಲ್ಲಿ ನೋಯ್ಡಾ ಪೊಲೀಸರು ₹ 1.07 ಮೌಲ್ಯದ ಅಕ್ರಮ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.

ಗ್ಯಾಂಗ್‌ಸ್ಟರ್‌ ನರೇಂದ್ರ ತುವಾಟಿಯಾ ಮತ್ತು ಆತನ ಸಹಚರರಾದ ಸುಂದರ್‌ ಭಾಟಿ ಮತ್ತು ಅನಿಲ್‌ ಭಾಟಿ ಎನ್ನುವವರಿಗೆ ಸೇರಿರುವ ಮನೆ ಮತ್ತು ಆಸ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

2019 ರಲ್ಲಿ ಕಸ್ನಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್‌ ಕಾಯ್ದೆ ಸೆಕ್ಷನ್ 14 (1) ಅಡಿಯಲ್ಲಿ ಪೊಲೀಸ್ ಕಮಿಷನರ್ ಲಕ್ಷ್ಮಿ ಸಿಂಗ್ ಅವರ ಸೂಚನೆಯ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಅಧಿಕೃತ ಮಾಹಿತಿಯ ಪ್ರಕಾರ, 2023 ರಲ್ಲಿ ಇದುವರೆಗೆ 39 ಪ್ರಕರಣಗಳಲ್ಲಿ ಗ್ಯಾಂಗ್‌ಸ್ಟರ್‌ ಮತ್ತು ಮಾಫಿಯಾಕ್ಕೆ ಸೇರಿದ ₹81.87 ಕೋಟಿ ಮೌಲ್ಯದ ಆಸ್ತಿಯನ್ನು ನೋಯ್ಡಾ ಪೊಲೀಸರು ಜಪ್ತಿ ಮಾಡಿದ್ದಾರೆ.

ಅಪರಾಧಿಗಳ ವಿರುದ್ಧ ಇದೇ ರೀತಿಯ ಕ್ರಮ ಮುಂದುವರಿಯಲಿದೆ ಎಂದು ನೋಯ್ಡಾ ಪೊಲೀಸರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.