ADVERTISEMENT

ತೈಲ ಬೆಲೆ ಏರಿಕೆ ವಿರುದ್ಧ ಒಡಿಶಾ ಬಂದ್‌–ಜನಜೀವನ ಅಸ್ತವ್ಯಸ್ತ

ಪಿಟಿಐ
Published 15 ಫೆಬ್ರುವರಿ 2021, 7:43 IST
Last Updated 15 ಫೆಬ್ರುವರಿ 2021, 7:43 IST
ಸಾಂದರ್ಭಿಕ ಚಿತ್ರ(ಒಡಿಶಾ ಕಾಂಗ್ರೆಸ್ ಟ್ವಿಟರ್‌)
ಸಾಂದರ್ಭಿಕ ಚಿತ್ರ(ಒಡಿಶಾ ಕಾಂಗ್ರೆಸ್ ಟ್ವಿಟರ್‌)   

ಭುವನೇಶ್ವರ: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ಪ ಸೋಮವಾರ ಕರೆ ನೀಡಿದ್ದ ಒಡಿಶಾ ಬಂದ್‌ನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಬೆಳಿಗ್ಗೆ 7 ಗಂಟೆಯಿಂದಲೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ರೈಲು ಸಂಚಾರದ ಮೇಲೆ ಬಂದ್ ಪರಿಣಾಮ ಬೀರಿತ್ತು. ಶಿಕ್ಷಣ ಸಂಸ್ಥೆಗಳು ಬಂದ್‌ ಆಗಿದ್ದವು. ಜಿಲ್ಲೆಯಾದ್ಯಂತ ಎಲ್ಲೂ ಅಹಿತಕರ ಘಟನೆಗಳು ಸಂಭವಿಸಿದ ವರದಿಯಾಗಿಲ್ಲ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಕಾರ್ಯಕರ್ತರು ರಾಜಧಾನಿ ಭುವನೇಶ್ವರ ಸೇರಿದಂತೆ ಹಲವು ಕಡೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿದರು. ರೈಲು ತಡೆಯನ್ನೂ ನಡೆಸಿದರು. ಬಂದ್‌‌ನಿಂದಾಗಿ ವಿಮಾನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.