ADVERTISEMENT

ಶಂಕಿತ ಐಎಸ್‌ ಉಗ್ರ ಸಾವು

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 18:32 IST
Last Updated 17 ಜನವರಿ 2019, 18:32 IST

ಕೇರಳ: ಉಗ್ರಗಾಮಿ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸೇರಿದ್ದ ಎನ್ನಲಾದ ಕೇರಳದ ಕಣ್ಣೂರು ಜಿಲ್ಲೆ ಅನ್ವರ್‌ ಸಾವಿಗೀಡಾಗಿದ್ದಾನೆ ಎಂದು ಶಂಕಿಸಲಾಗಿದೆ.

ಸುದ್ದಿಯ ವಿಶ್ವಾಸರ್ಹತೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2018ರಲ್ಲಿ ಇಸ್ಲಾಮಿಕ್ ಸ್ಟೇಟ್‌ಗೆ ಸೇರಲು ಭಾರತವನ್ನು ತೊರೆದಿದ್ದ ಹತ್ತು ಮಂದಿಯಲ್ಲಿ ಈತನು ಒಬ್ಬ.

ADVERTISEMENT

’ಅನ್ವರ್‌ ಅಫ್ಗಾನಿಸ್ತಾನದಲ್ಲಿ ಮೃತನಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುದ್ದಿಯ ಖಚಿತತೆ ಕುರಿತು ಮಾಹಿತಿ ಪಡೆಯಲು ಯತ್ನಿಸುತ್ತಿದ್ದೇವೆ‘ ಎಂದು ಕಣ್ಣೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಶಿವ ತಿಳಿಸಿದರು. ‌

ಅನ್ವರ್‌ ದುಬೈನಲ್ಲಿ ಚಾಲಕನಾಗಿದ್ದ. ಪತ್ನಿ, ಮೂವರು ಮಕ್ಕಳು ಮತ್ತು ಸಂಬಂಧಿಕರೊಂದಿಗೆ ಈತ ಐಎಸ್‌ ಉಗ್ರ ಸಂಘಟನೆಗೆ ಸೇರಲು ಅಫ್ಗಾನಿಸ್ತಾನಕ್ಕೆ ತೆರಳಿದ್ದ. ಅನ್ವರ್‌ ಸಾವಿನ ಕುರಿತು ಆತನ ಪತ್ನಿಗೆ ಆಡಿಯೊ ಸಂದೇಶ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.