ADVERTISEMENT

‘ಜೈ ಶ್ರೀರಾಮ್‌‘ ಘೋಷಣೆ ಕೂಗಲು ಒತ್ತಡ ಹಾಕಲ್ಲ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಪಿಟಿಐ
Published 25 ಜನವರಿ 2021, 7:53 IST
Last Updated 25 ಜನವರಿ 2021, 7:53 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಲಖನೌ: ‘ಜೈ ಶ್ರೀರಾಮ್‌‘ ಎಂದು ಘೋಷಣೆ ಕೂಗುವಂತೆ ಯಾರನ್ನೂ ಒತ್ತಾಯಿಸುವುದಿಲ್ಲ ಹಾಗೆಯೇ ಅಂಥ ಘೋಷಣೆಯನ್ನು ಕೂಗುವುದರ ಬಗ್ಗೆ ಯಾವುದೇ ಕೆಟ್ಟ ಭಾವನೆ ಹೊಂದುವುದು ಬೇಡ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಪ್ರತಿಪಾದಿಸಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ‘ಜೈ ಶ್ರೀರಾಮ್‌‘ ಎಂಬಂತಹ ಘೋಷಣೆ ಕೂಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆದಿತ್ಯನಾಥ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಮತಾ ಬ್ಯಾನರ್ಜಿಯವರ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಲವರಿಗೆ ‘ನಮಸ್ಕಾರ‘ ಅಥವಾ ‘ಜೈ ಶ್ರೀರಾಮ್‘ ಎನ್ನುವುದನ್ನು ಒಂದು ಸಂಪ್ರದಾಯ ಮತ್ತು ಶಿಷ್ಟಾಚಾರವಾಗಿ ಪಾಲಿಸುತ್ತಾರೆ. ಹಾಗಾಗಿ, ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುವ ಬಗ್ಗೆ ಯಾವುದೇ ಕೆಟ್ಟ ಭಾವನೆ ಹೊಂದಬೇಕಿಲ್ಲ. ನಾವೂ ಯಾರಿಗೂ ಈ ಘೋಷಣೆ ಕೂಗಬೇಕೆಂದು ಒತ್ತಡ ಹೇರುವುದಿಲ್ಲ‘ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.