ADVERTISEMENT

ಒಡಿಸ್ಸಿ ನೃತ್ಯ ಕಲಾವಿದೆ ಲಕ್ಷ್ಮಿಪ್ರಿಯಾ ಮೊಹಾಪಾತ್ರ ನಿಧನ

ಪಿಟಿಐ
Published 21 ಮಾರ್ಚ್ 2021, 11:26 IST
Last Updated 21 ಮಾರ್ಚ್ 2021, 11:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭುವನೇಶ್ವರ: ಒಡಿಸ್ಸಿ ನೃತ್ಯದ ದಂತಕತೆ ಕೇಳುಚರಣ ಮೊಹಾಪಾತ್ರ ಅವರ ಪತ್ನಿ ಹಾಗೂ ಒಡಿಸ್ಸಿ ನೃತ್ಯ ಕಲಾವಿದೆ ಲಕ್ಷ್ಮಿಪ್ರಿಯಾ ಮೊಹಾಪಾತ್ರ (86) ಶನಿವಾರ ಮಧ್ಯರಾತ್ರಿ ಇಲ್ಲಿನ ತಮ್ಮ ಮನೆಯಲ್ಲಿ ನಿಧನರಾದರು.

ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರಿಗೆ ಪುತ್ರ ರತಿಕಾಂತ್ ಮೊಹಾಪಾತ್ರ ಹಾಗೂ ಸೊಸೆ ಸುಜಾತಾ ಮೊಹಾಪಾತ್ರ ಇದ್ದಾರೆ. ಇಬ್ಬರೂ ಒಡಿಸ್ಸಿ ನೃತ್ಯಗುರುಗಳಾಗಿದ್ದಾರೆ.

ಪುರಿಯ ಅನ್ನಪೂರ್ಣ ಥಿಯೇಟರ್‌ನಲ್ಲಿ ಚಿಕ್ಕ ವಯಸ್ಸಿನಲ್ಲಿ ನೃತ್ಯಜೀವನವನ್ನು ಆರಂಭಿಸಿದ ಲಕ್ಷ್ಮಿಪ್ರಿಯಾ ಅವರು, ಕಟಕ್‌ನಲ್ಲಿರುವ ಅನ್ನಪೂರ್ಣ ಥಿಯೇಟರ್–ಬಿನಲ್ಲಿ ಕೇಳುಚರಣ ಮೊಹಾಪಾತ್ರ ಅವರ ಸಂಪರ್ಕಕ್ಕೆ ಬಂದರು. ಕೇಳುಚರಣ ಅವರು ಒಡಿಸ್ಸಿ ಮತ್ತು ಗೋಟಿಪುವಾ ನೃತ್ಯಪ್ರಕಾರಗಳಲ್ಲಿ ಪರಿಣತಿ ಸಾಧಿಸಿದ್ದರೂ ಥಿಯೇಟರ್‌ನಲ್ಲಿ ತಬಲಾ ವಾದಕರಾಗಿದ್ದರು. 1947ರಲ್ಲಿ ಕೇಳುಚರಣ ಅವರನ್ನು ವಿವಾಹವಾದ ನಂತರ ಲಕ್ಷ್ಮಿಪ್ರಿಯಾ ತಮ್ಮ ನೃತ್ಯಜೀವನವನ್ನು ತೊರೆದರು. ಒರಿಯಾ ಭಾಷೆಯ ನಾಲ್ಕು ಚಿತ್ರಗಳಲ್ಲೂ ಲಕ್ಷ್ಮಿಪ್ರಿಯಾ ನಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.