ADVERTISEMENT

ಇನ್ನು ಮುಂದೆ ನ. 15 ‘ಬುಡಕಟ್ಟು ಜನರ ಗೌರವ ದಿನ’: ಅಮಿತ್‌ ಶಾ

ಪಿಟಿಐ
Published 15 ನವೆಂಬರ್ 2021, 1:35 IST
Last Updated 15 ನವೆಂಬರ್ 2021, 1:35 IST
ಅಮಿತ್‌ ಶಾ
ಅಮಿತ್‌ ಶಾ    

ತಿರುಪತಿ: ಬುಡಕಟ್ಟು ಸಮುದಾಯಗಳ ಗೌರವಾರ್ಥವಾಗಿ ಇನ್ನು ಮುಂದೆ ಪ್ರತಿ ವರ್ಷದ ನವೆಂಬರ್ 15 ಅನ್ನು 'ಜನಜಾತೀಯ (ಬುಡಕಟ್ಟು ಜನರ) ಗೌರವ ದಿನ' ಎಂದು ಆಚರಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ತಿರುಪತಿಯಲ್ಲಿ ಭಾನುವಾರ ನಡೆದ ದಕ್ಷಿಣ ವಲಯ ಪರಿಷತ್‌ ಸಭೆಯಲ್ಲಿ ಮಾತನಾಡಿರುವ ಅಮಿತ್‌ ಶಾ, ‘ಭಾರತ ಸರ್ಕಾರವು ನವೆಂಬರ್ 15 ಅನ್ನು ‘ಬುಡಕಟ್ಟು ಜನರ ಗೌರವ ದಿನ’ವಾಗಿ ಆಚರಿಸಲು ನಿರ್ಧರಿಸಿದೆ. ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಬುಡಕಟ್ಟು ಸಮುದಾಯಗಳ ಕೊಡುಗೆಯನ್ನು ಎತ್ತಿ ಹಿಡಿಯಲು ಈ ದಿನವನ್ನು ಆಚರಿಸಲಾಗುವುದು,’ ಎಂದು ತಿಳಿಸಿದರು.

‘ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ತಮ್ಮ ರಾಜ್ಯಗಳ ಅಭಿವೃದ್ಧಿಗೆ ಆದಿವಾಸಿಗಳು ನೀಡಿರುವ ಕೊಡುಗೆಯನ್ನು ಪ್ರದರ್ಶಿಸಲು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಕ್ರಿಯಾ ಯೋಜನೆಯನ್ನು ರೂಪಿಸಬೇಕು,‘ ಎಂದೂ ಶಾ ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.