ADVERTISEMENT

ಸಣ್ಣ ಅಣು ಸ್ಥಾವರ ಸ್ಥಾಪನೆಗೆ ಪ್ರಸ್ತಾವ ಆಹ್ವಾನ

ಪಿಟಿಐ
Published 31 ಡಿಸೆಂಬರ್ 2024, 15:25 IST
Last Updated 31 ಡಿಸೆಂಬರ್ 2024, 15:25 IST
..
..   

ನವದೆಹಲಿ: ಉಕ್ಕು, ಅಲ್ಯೂಮಿನಿಯಂ, ತಾಮ್ರ ಮತ್ತು ಸಿಮೆಂಟ್‌ ಕೈಗಾರಿಕೆಗಳಲ್ಲಿ ಬಳಸುವ ಕಲ್ಲಿದ್ದಲು ಆಧಾರಿತ ಶಕ್ತಿ ಸ್ಥಾವರಗಳ ಬದಲಾಗಿ 220 ಮೆಗಾ ವಾಟ್‌ ಸಾಮರ್ಥ್ಯದ ಭಾರತ್‌ ಸಣ್ಣ ಸ್ಥಾವರಗಳನ್ನು(ಬಿಎಸ್‌ಆರ್‌) ಸ್ಥಾಪಿಸಲು ಭಾರತದ ಅಣು ಶಕ್ತಿ ನಿರ್ವಹಣಾ ಸಂಸ್ಥೆ ಎನ್‌ಪಿಸಿಐಎಲ್‌ ಪ್ರಸ್ತಾವವನ್ನು ಆಹ್ವಾನಿಸಿದೆ.

ಕೈಗಾರಿಕೆಗಳ ಡಿಕಾರ್ಬನೈಸೇಷನ್‌ಗೆ ಬಿಎಸ್‌ಆರ್‌ ಸುಸ್ಥಿರ ಪರಿಹಾರವನ್ನು ನೀಡಲಿದೆ ಎಂದು ಭಾರತೀಯ ಅಣು ಶಕ್ತಿ ಸಹಕಾರಿ ನಿಗಮ (ಎನ್‌ಪಿಸಿಐಎಲ್‌) ಪ್ರಕಟಣೆಯಲ್ಲಿ ತಿಳಿಸಿದೆ. 

ಖಾಸಗಿ ವಲಯದ ಸಹಭಾಗಿತ್ವದಲ್ಲಿ ಸರ್ಕಾರವು ಮುಂದಿನ ದಶಕದಲ್ಲಿ 40ರಿಂದ 50 ಅಣು ಸ್ಥಾವರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. 

ADVERTISEMENT

2024–25ರ ಬಜೆಟ್‌ನಲ್ಲಿ ಬಿಆರ್‌ಎಸ್‌ ಸ್ಥಾಪನೆ ಬಗ್ಗೆ ಘೋಷಣೆ ಮಾಡಲಾಗಿತ್ತು. ಅಸ್ಥಿತ್ವದಲ್ಲಿರುವ ಕಾನೂ‌ನು ವ್ಯಾಪ್ತಿಯೊಳಗೆ ಮತ್ತು ಅನುಮತಿ ಹೊಂದಿದ ವಾಣಿಜ್ಯ ಮಾದರಿಗಳ ‌ಅನ್ವಯ ಖಾಸಗಿ ಹೂಡಿಕೆಗಳೊಂದಿಗೆ ಬಿಆರ್‌ಎಸ್‌ ಸ್ಥಾಪನೆಗ ನಿರ್ಧರಿಸಲಾಗಿದೆ ಎಂದು ಎನ್‌ಪಿಸಿಐಎಲ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.