ADVERTISEMENT

ನೀಟ್ – ಒಳ ಉಡುಪು ತೆಗೆಸಿದ ಪ್ರಕರಣ ತನಿಖೆಗೆ ಸಮಿತಿ: 4 ವಾರಗಳಲ್ಲಿ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 15:37 IST
Last Updated 20 ಜುಲೈ 2022, 15:37 IST
ನೀಟ್‌ ಪರೀಕ್ಷೆ ವೇಳೆ ವಿದ್ಯಾರ್ಥಿನಿಯೊಬ್ಬರಿಂದ ಕಾಲ್ಗೆಜ್ಜೆಯನ್ನು ತೆಗೆಸುತ್ತಿರುವ ಸಿಬ್ಬಂದಿ/ಸಾಂದರ್ಭಿಕ ಚಿತ್ರ- ಐಎಎನ್‌ಎಸ್‌ ಚಿತ್ರ
ನೀಟ್‌ ಪರೀಕ್ಷೆ ವೇಳೆ ವಿದ್ಯಾರ್ಥಿನಿಯೊಬ್ಬರಿಂದ ಕಾಲ್ಗೆಜ್ಜೆಯನ್ನು ತೆಗೆಸುತ್ತಿರುವ ಸಿಬ್ಬಂದಿ/ಸಾಂದರ್ಭಿಕ ಚಿತ್ರ- ಐಎಎನ್‌ಎಸ್‌ ಚಿತ್ರ   

ನವದೆಹಲಿ: ನೀಟ್‌ ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿನಿಯೊಬ್ಬರ ಒಳ ಉಡುಪು ತೆಗೆಸಿದ ಪ್ರಕರಣ ಪರಿಶೀಲಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರಚಿಸಿರುವ ಮೂವರು ಸದಸ್ಯರ ಸಮಿತಿ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಟಿಎ ನಿರ್ದೇಶಕರಾದ ಸಾಧನಾ ಪರಾಶರ,ಕೇರಳದ ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲರಾದ ಅರಪ್ಪುರ ಶೈಲಜಾ ಮತ್ತು ಪ್ರಗತಿ ಅಕಾಡೆಮಿಯಸುಚಿತ್ರಾ ಶೈಜಿಂತ್ ಅವರು ಸಮಿತಿಯಲ್ಲಿದ್ದಾರೆ.ಸಮಿತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟವರ ಜತೆ ಚರ್ಚಿಸಿ, ವಿಷಯದ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಲಿದೆ.

‘ಸಂಬಂಧಿಸಿದ ಎಲ್ಲ ಜನರೊಂದಿಗೆ ಮಾತನಾಡಿದ ಬಳಿಕ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಲಿದೆ.ಎನ್‌ಟಿಎ ಭದ್ರತೆ, ಶಿಷ್ಟಾಚಾರಗಳು, ನಿಷೇಧಿತ ವಸ್ತುಗಳು, ವಸ್ತ್ರ ಸಂಹಿತೆ ಹಾಗೂ ನಗರ ಸಂಯೋಜಕರು, ಕೇಂದ್ರದ ಅಧೀಕ್ಷಕರು, ವೀಕ್ಷಕರು ಮಾರ್ಗಸೂಚಿ ಅನುಸರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಿದೆ. ಸಮಿತಿಯು ಅಗತ್ಯ ಶಿಫಾರಸುಗಳನ್ನು ಮಾಡಲಿದೆ’ ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿನಿಯರನ್ನು ಬಲವಂತಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ಕೇರಳದಲ್ಲಿ ಐವರು ಮಹಿಳೆಯರನ್ನು ಬಂಧಿಸಲಾಗಿದೆ. ಈ ವಿಷಯ ಪರಿಶೀಲಿಸಲು ಎಟಿಎ ಸತ್ಯಶೋಧನಾ ಸಮಿತಿ ರಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.