ಭುವನೇಶ್ವರ: ಒಡಿಶಾದ ಜನಪ್ರಿಯ ಗಾಯಕ ಮುರಳಿ ಮೊಹಾಪಾತ್ರ ಅವರು ಕೊರಾಪುಟ್‌ಜಿಲ್ಲೆಯಲ್ಲಿ ದುರ್ಗಾ ಪೂಜಾ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಅನಾರೋಗ್ಯಪೀಡಿತರಾಗಿದ್ದ ಮೊಹಾಪಾತ್ರ ಅವರುಭಾನುವಾರ ರಾತ್ರಿ ವೇದಿಕೆಯಲ್ಲಿ ಕುರ್ಚಿಯ ಮೇಲೆ ಕುಳಿತು ಹಾಡುತ್ತಿರುವಾಗಲೇ ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮೊಹಪತ್ರ ಅವರು ಮೃತಪಟ್ಟಿರುವುದಾಗಿವೈದ್ಯರು ಘೋಷಿಸಿದರು. ಈ ವರ್ಷದ ಆರಂಭದಲ್ಲಿ ಖ್ಯಾತ ಗಾಯಕ ಕೆ.ಕೆ. ಅವರೂ ಇದೇ ರೀತಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.