ADVERTISEMENT

ಜವಾದ್ ಚಂಡಮಾರುತ ಪ್ರಭಾವ: ಒಡಿಶಾದಲ್ಲಿ ಭಾರಿ ಮಳೆ

ಪಿಟಿಐ
Published 6 ಡಿಸೆಂಬರ್ 2021, 3:08 IST
Last Updated 6 ಡಿಸೆಂಬರ್ 2021, 3:08 IST
ಒಡಿಶಾದ ಭುವನೇಶ್ವರದಲ್ಲಿ ಭಾರಿ ಮಳೆಯಾಗಿದೆ – ಪಿಟಿಐ ಚಿತ್ರ
ಒಡಿಶಾದ ಭುವನೇಶ್ವರದಲ್ಲಿ ಭಾರಿ ಮಳೆಯಾಗಿದೆ – ಪಿಟಿಐ ಚಿತ್ರ   

ಭುವನೇಶ್ವರ: ‘ಜವಾದ್’ ಚಂಡಮಾರುತದ ಪ್ರಭಾವದಿಂದಾಗಿ ಒಡಿಶಾದ ಹಲವೆಡೆ ಭಾರಿ ಮಳೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತವು ಕಳೆದ 6 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಉತ್ತರ-ಈಶಾನ್ಯಕ್ಕೆ ಗಂಟೆಗೆ 20 ಕಿ.ಮೀ ವೇಗದಲ್ಲಿ ಚಲಿಸಿದೆ. ಗೋಪಾಲಪುರದಿಂದ 90 ಕಿ.ಮೀ, ಪುರಿಯಿಂದ 120 ಕಿ.ಮೀ, ಪರದೀಪ್‌ನಿಂದ 210 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಭಾನುವಾರ ರಾತ್ರಿ 11.30ರ ಹವಾಮಾನ ವರದಿ ತಿಳಿಸಿದೆ.

ಗಾಂಜಮ್‌, ಖುದ್ರಾ, ಪುರಿ, ಖೇಂದ್ರಪರ, ಕೇಂದ್ರಪರಾ ಹಾಗೂ ಜಗತ್‌ಸಿಂಗ್‌ಪುರದಲ್ಲಿ ಭಾನುವಾರದಿಂದ ಭಾರಿ ಮಳೆಯಾಗುತ್ತಿದೆ.

ADVERTISEMENT

ಕಾಳಿಕೋಟೆಯಲ್ಲಿ ದಾಖಲೆಯ 158 ಎಂ.ಎಂ. ಮಳೆಯಾಗಿದ್ದು, ನಯಾಗಡದಲ್ಲಿ 107.5 ಎಂ.ಎಂ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.