
ಹಣ
(ಸಾಂದರ್ಭಿಕ ಚಿತ್ರ)
ಭುವನೇಶ್ವರ: ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದಡಿ ಹೆಚ್ಚುವರಿ ತಹಶೀಲ್ದಾರ್ ಬರಂಗ್ ಎಂಬವರಿಗೆ ಸೇರಿದ ಸ್ಥಳಗಳ ಮೇಲೆ ಒಡಿಶಾ ವಿಚಕ್ಷಣ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದು, ₹75 ಲಕ್ಷ ನಗದು, ಮೂರು ಕಟ್ಟಡಗಳು, ಒಂದು ಫ್ಲಾಟ್ ಮತ್ತು ನಾಲ್ಕು ನಿವೇಶನಗಳು ಸೇರಿದಂತೆ ಅನೇಕ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ.
‘ಭುವನೇಶ್ವರದಲ್ಲಿ 2–3 ಅಂತಸ್ತಿನ ಕಟ್ಟಡಗಳು, ಒಂದು ಫ್ಲಾಟ್, ಖುರ್ದಾದಲ್ಲಿ ಎರಡು ಅಂತಸ್ತಿನ ಕಟ್ಟಡ, ₹75 ಲಕ್ಷ ನಗದು, 100 ಗ್ರಾಂ ಚಿನ್ನ ಮತ್ತು ಒಂದು ಕಾರು ಪತ್ತೆಯಾಗಿವೆ’ ಎಂದು ವಿಚಕ್ಷಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
‘ಕಂದಾಯ ಅಧಿಕಾರಿಯಾದ ಇವರು 1995ರಲ್ಲಿ ಕಟಕ್‌ನ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪ್ರಯೋಗಾಲಯ ಸಹಾಯಕರಾಗಿ ಕೆಲಸಕ್ಕೆ ಸೇರಿದ್ದರು. ಪುನರ್ವಸತಿ ಯೋಜನೆಯಡಿ ಮಾಸಿಕ ₹2,000 ಆರಂಭಿಕ ವೇತನ ಪಡೆಯುತ್ತಿದ್ದರು’ ಎಂದು ತಿಳಿಸಿದ್ದಾರೆ.
ಅದೇ ರೀತಿ, ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳು ಕಿಯೋಂಜಾರ್ ಜಿಲ್ಲೆಯ ಆರು ಸ್ಥಳಗಳಲ್ಲಿ ಪಂಚಾಯತ್ ವಿಸ್ತರಣಾ ಅಧಿಕಾರಿಗಳ (ಪಿಇಒ) ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.