ADVERTISEMENT

ದೇಶದಲ್ಲಿ ಪ್ರತಿ 36 ಶಿಶುಗಳ ಪೈಕಿ ಒಂದು ಶಿಶು ವರ್ಷದೊಳಗೆ ಸಾವು 

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 11:47 IST
Last Updated 4 ಜೂನ್ 2022, 11:47 IST
   

ನವದೆಹಲಿ : ದೇಶದಲ್ಲಿ ಕಳೆದ ಕೆಲವು ದಶಕಗಳಲ್ಲಿ ಶಿಶು ಮರಣ ಪ್ರಮಾಣ (ಐಎಂಆರ್‌) ಇಳಿಮುಖವಾಗಿದ್ದರೂ, ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪ್ರತಿ 36 ಶಿಶುಗಳಲ್ಲಿ ಒಂದು ಶಿಶು ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೊದಲೇ ಅಸುನೀಗುತ್ತಿದೆ.

ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಹೊಸ ಮಾಹಿತಿಯ ಪ್ರಕಾರ, 1971ಕ್ಕೆ ಹೋಲಿಸಿದರೆ (ಪ್ರತಿ ಸಾವಿರ ಶಿಶುಗಳಿಗೆ 129 ಶಿಶುಗಳು ಮರಣ ಅಪ್ಪಿವೆ) ಪ್ರಸ್ತುತ ಐಎಂಆರ್‌ ನಾಲ್ಕನೇ ಒಂದು ಭಾಗಕ್ಕಿಂತ ಕಡಿಮೆಯಾಗಿದೆ.

2020ರ ಸಾಲಿನಲ್ಲಿ ಪ್ರತಿ ಸಾವಿರ ಶಿಶುಗಳಿಗೆ 28 ಶಿಶುಗಳು ವರ್ಷ ತುಂಬುವುದರೊಳಗೆ ಮರಣ ಅಪ್ಪಿವೆ.ಕಳೆದ ಒಂದು ದಶಕದಲ್ಲಿ ಐಎಂಆರ್‌ಮಟ್ಟದಲ್ಲಿ ಶೇ 36ರಷ್ಟು ಇಳಿಕೆಯಾಗಿದ್ದು, ಪ್ರತಿ ಸಾವಿರ ಶಿಶುಗಳಲ್ಲಿ 44 ಶಿಶುಗಳು ಅಸುನೀಗುತ್ತಿದ್ದದ್ದು, ಈಗ 28ಕ್ಕೆ ಇಳಿದಿದೆ.

ADVERTISEMENT

ಒಂದು ದಶಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶಿಶು ಮರಣ ಪ್ರತಿ ಸಾವಿರಕ್ಕೆ 48 ಇದ್ದದ್ದು, 31ಕ್ಕೆ ಮತ್ತು ನಗರ ಪ್ರದೇಶದಲ್ಲಿ 29ರಿಂದ 19ಕ್ಕೆ ಇಳಿಕೆಯಾಗಿದೆ. ಕ್ರಮವಾಗಿ ಗ್ರಾಮೀಣದಲ್ಲಿ ಶೇ 35 ಮತ್ತು ನಗರ ಪ್ರದೇಶದಲ್ಲಿ ಶೇ 36ರಷ್ಟು ಶಿಶು ಮರಣ ಪ್ರಮಾಣ ತಗ್ಗಿದೆ ಎಂದು ವರದಿ ಹೇಳಿದೆ.2020ರಲ್ಲಿ ಮಧ್ಯಪ್ರದೇಶದಲ್ಲಿ ಸಾವಿರಕ್ಕೆ 43 (ಗರಿಷ್ಠ) ಮತ್ತು ಮತ್ತು ಮಿಜೋರಾಂನಲ್ಲಿ 3 ಶಿಶುಗಳು (ಕನಿಷ್ಠ) ವರದಿಯಾಗಿದೆ.

ಅಖಿಲ ಭಾರತ ಮಟ್ಟದಲ್ಲಿ ಜನನ ಪ್ರಮಾಣವು ಕಳೆದ ಐದು ದಶಕಗಳಲ್ಲಿ ಅಂದರೆ, 1971ರಲ್ಲಿ ಶೇ 36.9ರಷ್ಟು ಇದ್ದದ್ದು, 2020ರಲ್ಲಿ ಶೇ 19.5ಕ್ಕೆ ತೀವ್ರ ಕುಸಿದಿದೆ.ಜನನ ಪ್ರಮಾಣವು ಕಳೆದ ಒಂದು ದಶಕದಲ್ಲಿ ಶೇ 11ರಷ್ಟು ಕಡಿಮೆಯಾಗಿದೆ ಎಂದು ‌ವರದಿ ಹೇಳಿದೆ.

ಜನನ ಪ್ರಮಾಣದ ದರವು ಜನಸಂಖ್ಯೆಯ ಫಲವತ್ತತೆಯ ಅಳತೆಯಾಗಿದೆ. ಇದು ಜನಸಂಖ್ಯೆಯ ಬೆಳವಣಿಗೆಯ ನಿರ್ಣಾಯಕ ಅಳತೆಗೋಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.