ADVERTISEMENT

‘ವಿ.ವಿ ಸ್ಥಾಪಕ ಜೈಲಲ್ಲಿ, ರೈತರ ಹಂತಕನಿಗೆ ಜಾಮೀನು’: ಅಖಿಲೇಶ್ ವಾಗ್ದಾಳಿ

ಲಖಿಂಪುರ ಖೇರಿ ಪ್ರಕರಣ: ಅಖಿಲೇಶ್ ವಾಗ್ದಾಳಿ l ಚುನಾವಣೆಗಾಗಿ ಆಶಿಶ್ ಬಿಡುಗಡೆ: ವಿಪಕ್ಷಗಳ ಆರೋಪ

ಪಿಟಿಐ
Published 11 ಫೆಬ್ರುವರಿ 2022, 20:28 IST
Last Updated 11 ಫೆಬ್ರುವರಿ 2022, 20:28 IST
ರಾಮಪುರದಲ್ಲಿ ಸಮಾಜವಾದಿ ಪಕ್ಷವು ಆಯೋಜಿಸಿದ್ದ ಪ್ರಚಾರ ಸಭೆಯನ್ನು ಉದ್ದೇಶಿಸಿ ಅಖಿಲೇಶ್ ಯಾದವ್ ಮಾತನಾಡಿದರು –ಪಿಟಿಐ ಚಿತ್ರ
ರಾಮಪುರದಲ್ಲಿ ಸಮಾಜವಾದಿ ಪಕ್ಷವು ಆಯೋಜಿಸಿದ್ದ ಪ್ರಚಾರ ಸಭೆಯನ್ನು ಉದ್ದೇಶಿಸಿ ಅಖಿಲೇಶ್ ಯಾದವ್ ಮಾತನಾಡಿದರು –ಪಿಟಿಐ ಚಿತ್ರ   

ರಾಮಪುರ/ಲಖನೌ: ಲಖಿಂ ಪುರ ಖೇರಿಯಲ್ಲಿ ರೈತರ ಮೇಲೆ ಜೀಪು ಹರಿಸಿ ಕೊಂದ ಪ್ರಕರಣದ ಪ್ರಮುಖ ಆರೋಪಿ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್‌ ಜಾಮೀನು ನೀಡಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಆಶಿಶ್‌ಗೆ ಜಾಮೀನು ನೀಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಉತ್ತರ ಪ್ರದೇಶ ಚುನಾವಣೆಯ ಮೊದಲ ಹಂತದ ಮತದಾನ ನಡೆ ಯುತ್ತಿದ್ದ ವೇಳೆ, ಗುರುವಾರವೇ ಆಶಿಶ್‌ಗೆ ಜಾಮೀನು ಮಂಜೂರು ಮಾಡಲಾಗಿತ್ತು. ಆನಂತರ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ಚುನಾವಣಾ ಪ್ರಚಾರ ನಡೆಸಿದ್ದರು. ಅಜಯ್ ಮಿಶ್ರಾ ಅವರು ಲೋಕಸಭೆಯಲ್ಲಿ ಪ್ರತಿನಿಧಿಸು ತ್ತಿರುವ ಲಖಿಂಪುರ ಖೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕನೇ ಹಂತದಲ್ಲಿ ಮತ ದಾನ ನಡೆಯಲಿದೆ. ಆಶಿಶ್ ಮಿಶ್ರಾ ಬಿಡು ಗಡೆಯ ನಂತರ ಇಲ್ಲಿ ಪ್ರಚಾರಕ್ಕೆ ಬಿಜೆಪಿ ಭಾರಿ ಸಿದ್ಧತೆ ನಡೆಸಿದೆ.

ADVERTISEMENT

ರಾಮಪುರದಲ್ಲಿ ಸಮಾಜವಾದಿ ಪಕ್ಷವು ಶುಕ್ರವಾರ ನಡೆಸಿದ ರ‍್ಯಾಲಿಯಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ‘ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದ ಆಜಂ ಖಾನ್ ಅವರನ್ನು ಪುಸ್ತಕ ಮತ್ತು ಎಮ್ಮೆ ಕಳ್ಳತನದ ಆರೋಪದಲ್ಲಿ ಜೈಲಿನಲ್ಲಿ ಇರಿಸಲಾಗಿದೆ. ಆದರೆ ರೈತರ ಮೇಲೆ ಜೀಪು ಹರಿಸಿ ಕೊಂದ ಪ್ರಕರಣದ ಪ್ರಮುಖ ಆರೋಪಿ, ಕೇಂದ್ರ ಸಚಿವರ ಮಗ ಈಗ ಜಾಮೀನಿನ ಮೇಲೆ ಹೊರಗಿ ದ್ದಾನೆ. ಇದು ಬಿಜೆಪಿಯ ನವಭಾರತ’ ಎಂದು ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ.

ಮತದಾರರನ್ನು ಉದ್ದೇಶಿಸಿ ಮಾತ ನಾಡಿದ ಅಖಿಲೇಶ್, ‘ನಿಮಗಾಗಿ ವಿಶ್ವವಿದ್ಯಾಲಯ ನಿರ್ಮಿಸಿದ ವ್ಯಕ್ತಿ ಕೋಳಿ ಕಳ್ಳತನದ ಆರೋಪದಲ್ಲಿ ಜೈಲಿನಲ್ಲಿ ದ್ದಾರೆ. ಆದರೆ, ರೈತರನ್ನು ಅಪ್ಪಚ್ಚಿ ಮಾಡಿದ ವ್ಯಕ್ತಿ ಜೈಲಿನಿಂದ ಹೊರಗೆ ಇದ್ದಾನೆ. ಜಗತ್ತಿನಲ್ಲಿ ಎಲ್ಲಿಯೂ ರೈತರನ್ನು ಹೀಗೆ ಕೊಂದಿಲ್ಲ. ಆದರೆ ಈಗ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆ ಯುತ್ತಿದೆ. ಹೀಗಾಗಿಯೇ ಆರೋಪಿಗೆ ಜಾಮೀನು ದೊರೆತಿದೆ ಮತ್ತು ಆತ ಜೈಲಿನಿಂದ ಹೊರಗಿದ್ದಾನೆ’ ಎಂದು ಆರೋಪಿಸಿದ್ದಾರೆ. ‘ಈ ವಿಚಾರವನ್ನು ರೈತರು ಮರೆಯು ವುದಿಲ್ಲ. ಬಿಜೆಪಿಯು ರೈತರ ಎದುರು 700 ಬಸ್ಕಿ ಹೊಡೆದರೂ, ರೈತರು ಅವರನ್ನು ಕ್ಷಮಿಸುವುದಿಲ್ಲ. ಮೊದಲ ಹಂತದ ಮತದಾನದಲ್ಲೇ ರೈತರು ಮತ್ತು ಸಮಾಜದ ಎಲ್ಲಾ ವರ್ಗದ ಜನರು ಬಿಜೆಪಿಯನ್ನು ಅಳಿಸಿಹಾಕಿದ್ದಾರೆ. ಎರಡನೇ ಹಂತದ ಮತದಾನ ದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಅಳಿಸಿಹಾಕಲಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.