ADVERTISEMENT

ಹಿಂದುತ್ವವಾದಿಯಲ್ಲವಾದರೆ ಆತ ಹಿಂದುವಾದರೂ ಹಿಂದುವಲ್ಲ: ಬಿಜೆಪಿ ನಾಯಕ ಅನಿಲ್ ವಿಜ್

ಭಾರತ ಹಿಂದುಗಳ ದೇಶ, ಹಿಂದುತ್ವವಾದಿಗಳದ್ದಲ್ಲ ಎಂಬ ರಾಹುಲ್‌ ಹೇಳಿಕೆಗೆ ತಿರುಗೇಟು

ಪಿಟಿಐ
Published 12 ಡಿಸೆಂಬರ್ 2021, 16:00 IST
Last Updated 12 ಡಿಸೆಂಬರ್ 2021, 16:00 IST
ಅನಿಲ್‌ ವಿಜ್‌ ಮತ್ತು ರಾಹುಲ್‌ ಗಾಂಧಿ
ಅನಿಲ್‌ ವಿಜ್‌ ಮತ್ತು ರಾಹುಲ್‌ ಗಾಂಧಿ    

ಚಂಡೀಗಡ: ಭಾರತ ಹಿಂದುಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಅನಿಲ್‌ ವಿಜ್‌, ‘ಯಾರು ಹಿಂದುತ್ವವಾದಿಯಲ್ಲವೋ ಆತ ಹಿಂದುವಾಗಿದ್ದರೂ ಹಿಂದುವಲ್ಲ,’ ಎಂದಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ಭಾನುವಾರ ಕಾಂಗ್ರೆಸ್‌ ಸಮಾವೇಶವನ್ನು ಉದ್ದೇಶಿ ಮಾತನಾಡಿದ್ದ ರಾಹುಲ್‌ ಗಾಂಧಿ, ‘ಭಾರತವು ಹಿಂದುಗಳ ದೇಶ, ಹಿಂದುವಾದಿಗಳದ್ದಲ್ಲ,’ ಎಂದು ಹೇಳಿದ್ದರು. ‘ಹಿಂದುತ್ವವಾದಿಗಳನ್ನು ಅಧಿಕಾರದಿಂದ ಹೊರದಬ್ಬಿ, ಹಿಂದುಗಳನ್ನು ಮತ್ತೆ ಆ ಸ್ಥಾನದಲ್ಲಿ ಕೂರಿಸಬೇಕು’ ಎಂದು ಆಗ್ರಹಿಸಿದ್ದರು.

ಇದಕ್ಕೆ ಪ್ರತಿಯಾಗಿ ಟ್ವೀಟ್‌ ಮಾಡಿರುವ ಹರಿಯಾಣದ ಗೃಹ ಸಚಿವ ಅನಿಲ್‌ ವಿಜ್‌, ‘ಯಾರು ಹಿಂದುತ್ವವಾದಿಯಲ್ಲವೋ, ಆತ ಹಿಂದುವಾಗಿದ್ದರೂ ನಕಲಿಯೇ,’ ಎಂದಿದ್ದಾರೆ.

ADVERTISEMENT

ದೇಶದಲ್ಲಿ ಹಣದುಬ್ಬರ ಮತ್ತು ಅದಕ್ಕೆ ಸಂಬಂಧಿಸಿದ್ದ ಸಂಕಷ್ಟದ ಪರಿಸ್ಥಿತಿ ಎಂಬುದು ಇದ್ದರೆ ಅದು ಹಿಂದುತ್ವವಾದಿಗಳು ಸೃಷ್ಟಿ ಮಾಡಿದ್ದು ಎಂದು ರಾಹುಲ್‌ ಕಿಡಿಕಾರಿದ್ದರು.

ಅಲ್ಲದೆ, ‘ಗಾಂಧಿ ಹಿಂದುವಾದರೆ, ಗೋಡ್ಸೆ ಹಿಂದುತ್ವವಾದಿ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.