ADVERTISEMENT

ಮನೆಯಲ್ಲಿ ಹಣ ಗಳಿಸಲು ವರ್ಕ್‌ ಫ್ರಂ ಹೋಮ್ ಹಗರಣ: ನಾಲ್ವರ ಬಂಧನ

ಪಿಟಿಐ
Published 22 ಜುಲೈ 2025, 13:46 IST
Last Updated 22 ಜುಲೈ 2025, 13:46 IST
   

ನವದೆಹಲಿ: ವ್ಯಕ್ತಿಯೊಬ್ಬರಿಗೆ ₹17 ಲಕ್ಷಕ್ಕೂ ಹೆಚ್ಚು ಹಣ ವಂಚನೆ ನಡೆಸಿದ ಆರೋಪ‍ದ ಮೇಲೆ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ದೇಶದಾದ್ಯಂತ ಮನೆಯಲ್ಲೆ ಇದ್ದು ವೆಬ್‌ಸೈಟ್‌ಗಳನ್ನು ಪರಿಶೀಲಿಸುವ ಮೂಲಕ ಹಣ ಗಳಿಸಿ ಎಂದು ಆರೋಪಿಗಳು ಸಂತ್ರಸ್ತರಿಗೆ ಆಮಿಷವೊಡ್ಡಿ ವಂಚನೆ ಎಸಗುತ್ತಿ‌ದ್ದರು.

ಅಂಕುರ್ ಮಿಶ್ರಾ (22), ಕ್ರತಾರ್ಥ್ (21), ವಿಶ್ವಾಸ್ ಶರ್ಮಾ (32) ಮತ್ತು ಕೇತನ್ ಮಿಶ್ರಾ (18) ಬಂಧಿತರು. ಆರೋಪಿಗಳು ಸಂತ್ರಸ್ತರನ್ನು ಸಾಮಾಜಿಕ ಮಾಧ್ಯ‌ಮಗಳ ಮೂಲಕ ಸಂಪರ್ಕಿಸಿ ಅವರಿಗೆ ಆಕರ್ಷಕ ಆನ್‌ಲೈನ್ ಉದ್ಯೋಗದ ನೆಪದಲ್ಲಿ ಅವರನ್ನು ವಂಚಿಸುತ್ತಿದ್ದರು.

ADVERTISEMENT

‘ಮೇ 27ರಂದು ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಪ್ರಕಾರ, ವೆಬ್‌ಸೈಟ್‌ಗಳನ್ನು ವಿಮರ್ಶೆ ಮಾಡಿ ಎಂದು ಆರೋಪಿಗಳು ತನ್ನನ್ನು ಸಂಪರ್ಕಿಸಿದ್ದರು. ಆರಂಭದಲ್ಲಿ ವ್ಯಕ್ತಿಯು ಪ್ರತಿ ವಿಮರ್ಶೆಗೆ ₹50 ಪಡೆದಿದ್ದರು. ನಂತರ ಅವರನ್ನು ಕ್ರಿಪ್ಟೊ ಕರೆನ್ಸಿ ಕೊಳ್ಳುವಂತೆ ಮತ್ತು ಅದರಿಂದ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿ ಲಕ್ಷಾಂತರ ಹಣ ವಂಚಿಸಿದ್ದಾರೆ’ ಎಂದು ನೈರುತ್ಯ ಡಿಸಿಪಿ ಅಮಿತ್ ಗೋಯೆಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.