ADVERTISEMENT

ಆಪರೇಷನ್ ಸಿಂಧೂರಕ್ಕೆ 400 ಇಸ್ರೊ ವಿಜ್ಞಾನಿಗಳ ನೆರವು

ಪಿಟಿಐ
Published 9 ಸೆಪ್ಟೆಂಬರ್ 2025, 13:46 IST
Last Updated 9 ಸೆಪ್ಟೆಂಬರ್ 2025, 13:46 IST
ವಿ.ನಾರಾಯಣನ್‌
ವಿ.ನಾರಾಯಣನ್‌   

ನವದೆಹಲಿ: ‘ಆಪರೇಷನ್‌ ಸಿಂಧೂರ’ ಸಂದರ್ಭದಲ್ಲಿ ಸುಮಾರು 400 ವಿಜ್ಞಾನಿಗಳು ದಿನದ 24 ತಾಸೂ ಕೆಲಸ ಮಾಡುವ ಮೂಲಕ ಭಾರತೀಯ ಸೇನೆಗೆ ಬೆಂಬಲ ನೀಡಿದ್ದರು ಎಂದು ಇಸ್ರೊ ಮುಖ್ಯಸ್ಥ ವಿ.ನಾರಾಯಣನ್‌ ಅವರು ಮಂಗಳವಾರ ತಿಳಿಸಿದರು.

ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್‌ನ (ಎಐಎಂಎ) 52ನೇ ಮ್ಯಾನೇಜ್‌ಮೆಂಟ್‌ ಶೃಂಗದಲ್ಲಿ ಮಾತನಾಡಿದ ನಾರಾಯಣನ್ ಅವರು, ರಾಷ್ಟ್ರೀಯ ಭದ್ರತಾ ಅಗತ್ಯಗಳಿಗೆ ಅನುಗುಣವಾಗಿ ಇಸ್ರೊ ಉಪಗ್ರಹ ದತ್ತಾಂಶಗಳನ್ನು ಒದಗಿಸಿತ್ತು ಎಂದು ತಿಳಿಸಿದರು.

‘ಆಪರೇಷನ್‌ ಸಿಂಧೂರ ಸಂದರ್ಭದಲ್ಲಿ ನಮ್ಮ ಎಲ್ಲ ಉಪಗ್ರಹಗಳು ಅಷ್ಟೂ ದಿನ ಹಗಲು–ರಾತ್ರಿ ಕರಾರುವಾಕ್ಕಾಗಿ ಕಾರ್ಯನಿರ್ವಹಿಸಿ ನಮ್ಮ ಎಲ್ಲ ಅಗತ್ಯಗಳನ್ನು ಪೂರೈಸಿದ್ದವು’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.