ADVERTISEMENT

ಮಹಾರಾಷ್ಟ್ರ | ವಿಧಾನಮಂಡಲ ಅಧಿವೇಶನ: ಚಹಾ ಕೂಟ ಬಹಿಷ್ಕರಿಸಲು MVA ನಿರ್ಧಾರ

ಪಿಟಿಐ
Published 15 ಡಿಸೆಂಬರ್ 2024, 10:03 IST
Last Updated 15 ಡಿಸೆಂಬರ್ 2024, 10:03 IST
   

ನಾಗ್ಪುರ (ಮಹಾರಾಷ್ಟ್ರ): ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮುನ್ನಾದಿನದಂದು (ಭಾನುವಾರ) ಮಹಾರಾಷ್ಟ್ರ ಸರ್ಕಾರ ಆಯೋಜಿಸಿರುವ ಚಹಾ ಕೂಟವನ್ನು ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ(MVA) ಬಹಿಷ್ಕರಿಸಲಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ ಹೇಳಿದ್ದಾರೆ.

ನಾಗ್ಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಾನ್ವೆ, ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಬಲ ಕಡಿಮೆಯಾಗಿದ್ದರೂ ಅದು ತನ್ನ ಸಂಪೂರ್ಣ ಬಲದೊಂದಿಗೆ ರೈತರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳು ಸೇರಿ ವಿವಿಧ ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.

ಚಳಿಗಾಲದ ಅಧಿವೇಶನವನ್ನು ಆರು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ. ಇದು ತುಂಬಾ ಕಡಿಮೆ ಅವಧಿ ಎಂದೂ ಅವರು ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್ ನಾಯಕ ವಿಜಯ್ ವಾಡೆಟ್ಟಿವಾರ್ ಕೂಡ ಅಧಿವೇಶನದ ಅವಧಿ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.