ADVERTISEMENT

ಎಐಎಡಿಎಂಕೆ ಪಕ್ಷದ ಚಿಹ್ನೆ ಕುರಿತಾದ ಪನ್ನೀರಸೆಲ್ವಂ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 16:49 IST
Last Updated 11 ಜನವರಿ 2024, 16:49 IST
ಮರೀನಾ ಬೀಚ್‌ನಲ್ಲಿರುವ ಜಯಲಲಿತಾ ಅವರ ಸಮಾಧಿ ಮುಂದೆ ಧ್ಯಾನ ಮಾಡಿದ ಉಸ್ತುವಾರಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಕಣ್ಣೊರೆಸಿಕೊಂಡರು
ಮರೀನಾ ಬೀಚ್‌ನಲ್ಲಿರುವ ಜಯಲಲಿತಾ ಅವರ ಸಮಾಧಿ ಮುಂದೆ ಧ್ಯಾನ ಮಾಡಿದ ಉಸ್ತುವಾರಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಕಣ್ಣೊರೆಸಿಕೊಂಡರು   

ಚೆನ್ನೈ: ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿತರಾಗಿರುವ ಒ. ಪನ್ನೀರಸೆಲ್ವಂ ಅವರು ಪಕ್ಷದ ಚಿಹ್ನೆ, ಎರಡು ಎಲೆಗಳು ಹಾಗೂ ಬಾವುಟ, ಅಧಿಕೃತ ಲೆಟರ್‌ಹೆಡ್ ಬಳಸುವಂತಿಲ್ಲ ಎಂದು ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ನ ವಿಭಾಗೀಯ ಪೀಠವು ಗುರುವಾರ ವಜಾಗೊಳಿಸಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಪನ್ನೀರಸೆಲ್ವಂ ಅವರು ಮೇಲ್ಮನವಿ ಸಲ್ಲಿಸಿದ್ದರು. ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಬದಲಾಯಿಸಲು ಯಾವ ಆಧಾರವೂ ಇಲ್ಲ ಎಂದು ವಿಭಾಗೀಯ ಪೀಠವು ಹೇಳಿದೆ.

ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ 2022ರ ಜುಲೈ 11ರಂದು ಉಚ್ಚಾಟಿಸಲಾಗಿತ್ತು. ಅದರ ನಂತರವೂ ಅವರು ತಮ್ಮನ್ನು ಪಕ್ಷದ ಸಮನ್ವಯಕಾರ ಎಂದು ಕರೆದುಕೊಂಡಿದ್ದರು, ಪಕ್ಷದ ಚಿಹ್ನೆ ಹಾಗೂ ಲೆಟರ್‌ಹೆಡ್ ಬಳಕೆ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿ ಎಐಎಡಿಎಂಕೆ ಹೈಕೋರ್ಟ್‌ ಮೆಟ್ಟಿಲೇರಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.